ಕೊಪ್ಪಳ:- ಜಿಲ್ಲೆಯ ಗುಂಡೂರು ಗ್ರಾಮ ಪಂಚಾಯತಿಯಲ್ಲಿ ನೆಡೆದ 50 ಲಕ್ಷ ರೂ ಭ್ರಷ್ಟಾಚಾರದ ತನಿಖೆ ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಪ್ಪಳ ಕಾರ್ಯಕರ್ತರು ಜಿಲ್ಲಾ ಪಂಚಾಯತಿ ಸಿಇಓ ಇವರಿಗೆ ಮನವಿ ಸಲ್ಲಿಸಿದರು.
ನಂತರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭೀಮಾನಿ ಬಣ ಕೊಪ್ಪಳ ಜಿಲ್ಲಾಧ್ಯಕ್ಷ ಸಂತೋಷ ಮಾತನಾಡಿ ನರೇಗಾದಲ್ಲಿ ಸುಮಾರು 50ಲಕ್ಷ ವೆಚ್ಚದಲ್ಲಿ ಕೈಗೊಮಡ ಕಾಮಗಾರಿಗಳ ಹಣದ ವಿವರ ನೀಡುತ್ತಿಲ್ಲ. ಗ್ರಾಮದಲ್ಲಿ ಕರ ವಸೂಲಿ ಮಾಡಿದ ಹಣವನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿದ್ದಾರೆ. ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ಚೆಕ್‌ಗಳ ದುರ್ಬಳಕೆ ಮಾಡಿಕೊಂಡಿದ್ದಾರೆ ಇದನ್ನು ತಕ್ಷಣಾ ತನಿಖೆ ಕೈಗೊಂಡು ತಪ್ಪು ಮಾಡಿದವರಿಗೆ ಕ್ರಮ ಕೈಗೊಳ್ಳಬೇಕು ಮತ್ತು ವಿವಿಧ ಆರೋಪಗಳ ಬಗ್ಗೆ ಗ್ರಾಪಂ ಉಪಾಧ್ಯಕ್ಷರು ಹಾಗೂ ಸದಸ್ಯರು ದೂರು ಸಲ್ಲಿಸಿದ್ದರು. ಸಿಇಓ ಭ್ರಷ್ಟಾಚಾರ ತನಿಖೆಗೆ ಅಧಿಕಾರಿಗಳ ತಂಡ ರಚಿಸಿ, ತಕ್ಷಣ ವರದಿ ಒಪ್ಪಿಸುವಂತೆ ಸೂಚಿಸಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಜರುಗಿಲ್ಲ. ಅನಿವಾರ್ಯವಾಗಿ ತಾಪಂ ಸಹಾಯಕ ನಿರ್ದೇಶಕಿ ವೈ.ವನಜಾ ಬೇಟಿ ನೀಡಿ ಮನವಲಿಸು ಯತ್ನ ವಿಫಲವಾಯಿತು.
ಆದ ಕಾರಣ ದಿನಾಂಕ : 12.06.2024ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 24 ಗಂಟೆಯಲ್ಲಿ ಪರಿಶೀಲಿಸಿ ವರದಿಯನ್ನು ನೀಡಬೇಕೆಂದು ಆದೇಶ ಹೊರಡಿಸಿದರು ಆದರೆ ಇದುವರೆಗೆ ತನಿಖಾ ತಂಡ ಪಂಚಾಯತಿಗೆ ಬರದೇ ಇರುವುದು ಮತ್ತು ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಮತ್ತು ಪಂಚಾಯತಿ ಉಪಾಧ್ಯಕ್ಷರು ಶ್ರೀಮತಿ ಸತ್ಯವತಿ ಗಂಡ ಶ್ರೀನಿವಾಸ ಮತ್ತು 17 ಸದಸ್ಯರುಗಳು ಸೇರಿ ದಿನಾಂಕ : 19.06.2024ರಂದು ಗುಂಡೂರು ಪಂಚಾಯ್ತಿಯಲ್ಲಿ ಹೋರಾಟ ನಡೆಸಿ 3ದಿನಗಳಲ್ಲಿ ತನಿಖೆ ನಡೆಸಬೇಕೆಂದು ಮನವಿ ಸಲ್ಲಿಸಲಾಗಿದೆ ಆದರೂ ಕೂಡ ಯಾವುದೇ ತನಿಖೆ ನಡೆಯಲಿಲ್ಲ ಆದ ಕಾರಣ ತಾವುಗಳು ಮನವಿಯನ್ನು ಸ್ವೀಕರಿಸಿ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ನಾವು ಜಿಲ್ಲಾ ಪಂಚಾಯತಿ ಮುಂದೆ ರಾಜ್ಯ ಸಮಿತಿ ಮತ್ತು ಜಿಲ್ಲಾ ಸಮಿತಿ ಇಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ಸಂತೋಷ್ ತೋಟದ್,
ರಂಗಪ್ಪ ನಾಯಕ,
ರಾಕೇಶ ಜಿಲ್ಲಾಧ್ಯಕ್ಷರು ಕೊಪ್ಪಳ ,ತಾಲೂಕಾಧ್ಯಕ್ಷರು ಕಾರಟಗಿ,
ತಾಲೂಕಾಧ್ಯಕ್ಷರು ಕನಕಗಿರಿ,
ಹಾಗೂ ನಮ್ಮ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.