ಕುಷ್ಟಗಿ-19ಜೂ-ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಮಗೇರಾ ದಲ್ಲಿ ಶಾಲಾ ದಾಖಲಾತಿ ಮತ್ತು ಹಾಜರಾತಿ ಆಂದೋಲನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಷ್ಟಗಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ಸ್ ನ ಸಹಯೋಗಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಗ್ರಾಮಪಂಚಾಯತಿ ಅಧ್ಯಕ್ಷರು, ಎಸ್. ಡಿ. ಎಮ್. ಸಿ ಅಧ್ಯಕ್ಷರು, ಇ. ಸಿ. ಓ, ಸಿ.ಆರ್. ಪಿ ಮತ್ತು ಮುಖ್ಯೋಪಾಧ್ಯಾಯರು ಚಾಲನೆ ನೀಡುವದರ ಮೂಲಕ ಅದ್ಧೂರಿಯಾಗಿ ಮತ್ತು ಅರ್ಥ ಪೂರ್ಣವಾಗಿ ಡ್ರಮ್ ಸೆಟ್ ಮೂಲಕ ಅಲಂಕೃತ ಗೊಂಡ ವಾಹನದಲ್ಲಿ ಹೊಸದಾಗಿ ದಾಖಲಾದ ಮಕ್ಕಳನ್ನು ಮೆರವಣಿಗೆ ಮೂಲಕ ಘೋಷಣೆ ಕೂಗುತ್ತ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಹೊಸದಾಗಿ ದಾಖಲಾದ ಮಕ್ಕಳಿಗೆ ಅಕ್ಷರಭ್ಯಾಸವನ್ನು ಮಾಡಿಸಿ, ನೋಟ್ ಬುಕ್ ಮತ್ತು ಪೆನ್ಸಿಲ್ ವಿತರಿಸುವ ಮೂಲಕ ಮಕ್ಕಳನ್ನು ಸ್ವಾಗತಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪರಸಪ್ಪ ಗಂಗನಾಳ ಮತ್ತು ಸದಸ್ಯರು ಹಾಗೂ ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಪರಶುರಾಮ ತರಲಕಟ್ಟಿ ಮತ್ತು ಸದಸ್ಯರು ಜೊತೆಗೆ ಇ. ಸಿ. ಓ ಶ್ರೀ ರಾಗಪ್ಪ ಶ್ರೀರಾಮ್.ಸಿ ಆರ್ಪಿಗಳಾದ ಶ್ರೀಬಸವರಾಜ್ ಕುಂಬಳಾವತಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಗೀತಾಬಾಯಿ ಆಚಾರ್ಯ ಹಾಗೂ ಸಹ ಸಿಬ್ಬಂದಿ ಮತ್ತು ಟಾಟಾ ಟ್ರಸ್ಟನ ಕಾರ್ಯಕ್ರಮ ಸಂಯೋಜಕರಾದ ಬಾಷುಸಾಬ್, ಲಕ್ಷಿಕಾಂತ, ಪ್ರೇರಕರಾದ ಕುಮಾರಿ ನವರತ್ನ, ಗ್ರಾಮದ ಯುವಕರು, ಶಿಕ್ಷಣ ಪ್ರೇಮಿಗಳು ಮತ್ತು ಹಿರಿಯರು ಹಾಜರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ