ಗಂಗಾವತಿ.09 ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಇವರ ನೇತೃತ್ವದಲ್ಲಿ ಮೊಹರಂ ಹಬ್ಬದ ಆಚರಣೆಯ ಶಾಂತಿ ಸಭೆ ಹಮ್ಮಿ ಕೊಂಡಿದ್ದು ಗಂಗಾವತಿ ನಗರ ಮತ್ತು ಗ್ರಾಮೀಣದ ಸರ್ವ ಸಮುದಾಯದ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆದಿದ್ದು. ಸಭೆಯಲ್ಲಿ ಮೊಹರಂ ಆಚರಣೆಯು ಹಿಂದೂ ಮುಸ್ಲಿಮಗಳ ಭಾವೈಕ್ಯತೆಯ ಆಚರಣೆಯಾಗಿದ್ದು.
ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅವಶ್ಯಕತೆಗೆ ತಕ್ಕಂತೆ ಕಾನೂನು ಬದ್ಧವಾಗಿ ಮತ್ತು ಕೋಮು ಗಲಭೆಗೆ ಅವಕಾಶ ನೀಡದಂತೆ ಶಾಂತಿ ಯುತವಾಗಿ ಆಚರಿಸಲು ಮುಖಂಡರ ಜೊತೆಗೆ ಪೋಲಿಸ್ ಇಲಾಖೆ ಮತ್ತು ಅವರ ಸಿಬ್ಬಂದಿಗಳ ಸಹಕಾರ ದೊಂದಿಗೆ ಆಚರಿಸಿ ಎಂದು ಸಲಹೆಯನ್ನು ನೀಡಿದರು.
ನಾಗರಹಳ್ಳಿ .ಸಂಗಾಪುರ. ಹಾರಳ. ಸಿಂಗನಾಳ. ಈ ನಾಲ್ಕು ಗ್ರಾಮಗಳಿಗೆ ಮೊಹರಂ ಆಚರಣೆಗೆ ಅನುಮತಿ ನೀಡಿದ್ದಾರೆ..
ಈ ಸಂದರ್ಭದಲ್ಲಿ ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಸೋಮಶೇಖರ್ ಜುಟ್ಟಲ್, ನಗರ ಠಾಣೆ ಸಿಪಿಐ ಪ್ರಕಾಶ ಮಾಳೆ,ಪಿಎಸ್ಐ ಪುಂಡಪ್ಪ ಜಾದವ್,ಶಾರಮ್ಮ,ಪರಮೇಶ್ಚರಪ್ಪ,ಅನ್ಸಾರಸಾಬ,ಸೇರಿದಂತೆ ಇತರರು ಇದ್ದರು,
ಗಂಗಾವತಿ ವರದಿಗಾರ
ಹನುಮೇಶ ಬಟಾರಿ