ಅದ್ದೂರಿಯಾಗಿ ಜರುಗಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

Gadi Kannadiga
ಅದ್ದೂರಿಯಾಗಿ ಜರುಗಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ
WhatsApp Group Join Now

ಕುಷ್ಟಗಿ:-ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ಪುರಸಭೆ ಹಾಗೂ ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.

ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಯಕರು ಎಂದರೆ ಹುಟ್ಟತ್ತಲೇ ನಾಯಕರು ವಾಲ್ಮೀಕಿ ಜನಾಂಗದವರು.
ಪ್ರಮುಖ ಗ್ರಂಥಗಳನ್ನು ಬರೆದವರು ಶೂದ್ರ ಜನಾಂಕ್ಕೆ ಸೇರಿದವರು. ರಾಮಯಣ ಬರೆದವರು ವಾಲ್ಮೀಕಿ ಜನಾಂಗದವರು. ಶ್ರೀರಾಮನ ಸೃಷ್ಟಿ ಮಾಡಿದವರು ವಾಲ್ಮೀಕಿ ಯವರು
ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಎಂದು ನಾಮಕರಣ ಮಾಡಿದ ಕೀರ್ತಿ ಮೋದಿಜೀಯವರಿಗೆ ಸಲ್ಲುತ್ತದೆ. ವಾಲ್ಮೀಕಿ ನಾಯಕಸಮಾಜದ ಗುರುಭಕ್ತಿಗಾಗಿ ಏಕಲವ್ಯ, ದೈವ ಭಕ್ತಿ ಬೇಡರಕಣ್ಣಪ್ಪ, ಪ್ರಜೆಗಳೆಗಾಗಿ ವೀರಮದಕರಿ ನಾಯಕ, ಸ್ವಾತಂತ್ರ‍್ಯಕ್ಕಾಗಿ ಹಲಗಲಿ ಬೇಡರು ಕೊಡುಗೆ ಅಪಾರವಾಗಿದೆ. ಸಮಾಜದವರು ಶಿಕ್ಷಣವಂತರಾದರೇ ಬೆಳೆಯಲುಸಾಧ್ಯ ಎಂದರು.

ನಗರದ ಸರಕಾರಿ ಪ .ಪೂ ಕಾಲೇಜಿನ ಉಪನ್ಯಾಸಕ ಶರಣಪ್ಪ ಎಸ್ ಪೂಜಾರ ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ ಸಮಾಜದ ದೃಷ್ಟಿಯನ್ನು ಬದಲಾಯಿಸಿದವರು.ರಾಮಯಣ ಸಹೋದರ ಹೇಗೆ ಬದುಕಬೇಕಬದನ್ನು ಕಲಿಸು ಕೊಡುತ್ತದೆ. ವಾಲ್ಮೀಕಿ, ನಾಯಕ ಸಮಾಜ ಗುರು ಭಕ್ತಿಗೆ ಬೆರಳು, ದೈವ ಭಕ್ತಿಗಾಗಿ ಕಣ್ಣು, ನಾಡಿಗಾಗಿ ಖಡ್ಗ ಹಿಡಿದ ಸಮಾಜ. ಲೋಕದ ಸನ್ಮಾರ್ಗಕ್ಕಾಗಿ ಆದಿಕಾವ್ಯ ರಾಮಾಯಣ ನೀಡಿದ ಸಮಾಜ. ಸಮಾಜದವರು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರಿಯಬೇಕು. ಶಿಕ್ಷಣ ವಂತರಾಗಬೇಕು ಎಂದರು.

ಯುವ ಮುಖಂಡ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪೂರು ಮಾತನಾಡಿ, ಯುವಕರು ನಟ, ರಾಜಕಾರಣಗಳು ಹಾಗೂ ಆಡಳಿತ ವರ್ಗ ಹಾಗೂ ಸಮಾಜದ ಹಿರಿಯರು, ಯುವಕರನ್ನು ಅನುಕರಣೆ ಮಾಡಬೇಕು. ಅಧಿಕಾರಿಗಳಿಗೆ ರಾಜಕಾರಣಗಳಿಗೆ ಜಾತಿ ಬಣ್ಣ ಬಳಿಯುವುದು ಬೇಡ. ಶಿಕ್ಷಣವಂತವರಾಗ ಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಶಿಕ್ಷಣದಲ್ಲಿ ಬದಲಾವಣೆ ಕಾಣುತ್ತೇವೆ ಎಂದರು.

ವಾಲ್ಮೀಕಿ ಸಮಾಜದ ತಾಲೂಕಾ ಅಧ್ಯಕ್ಷ ಮಾನಪ್ಪ ತಳವಾರ ಮಾತನಾಡಿ, ಮಹರ್ಷಿಯವರು ಜಗತ್ತಿಗೆ ಸಂಸ್ಕೃತ ಸಂವಿಧಾನ ನೀಡಿದ್ದಾರೆ. ನಮ್ಮ ಸಮಾಜದವರು ಶಿಕ್ಷಣ ವಂತವರಾಗಬೇಕು ಎಂದರು.

ಜಿ.ಪo.ಮಾಜಿ ಸದಸ್ಯ ಕೆ ಮಹೇಶ, ತಹಸೀಲ್ದಾರ ಅಶೋಕ ಶಿಗ್ಗಾಂವಿ, ರವಿಕುಮಾರ ಹಿರೇಮಠ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ, ತಹಸೀಲ್ದಾರ ಅಶೋಕ ಶಿಗ್ಗಾಂವಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ವಿ ಆಯ್ ಬಿಳಗಿ , ಸಿಪಿಐ ಯಶವಂತ ಬಿಸನಹಳ್ಳಿ, ಪಿಎಸ್ ಐ ಹನಮಂತಪ್ಪ ತಳವಾರ , ತಾಲೂಕ ಪರಿಶಿಷ್ಟ ವರ್ಗಗಗಳ ಕಲ್ಯಾಣಾಧಿಕಾರಿ ವೀರಪ್ಪ, ಸಮಾಜ ಸೇವಕ ರವಿಕುಮಾರ ಹಿರೇಮಠ, ದೊಡ್ಡಬಸನಗೌಡ ಪಾಟೀಲ್ ಬಯ್ಯಾಪೂರು, ಜಿಪಂಮಾಜಿ ಅಧ್ಯಕ್ಷೆ ಮಾಲತಿ ನಾಯಕ, ರಮೇಶ ಕೊಳ್ಳಿ,ಶಿವನಗೌಡ ನಾಯಕ, ವಸಂತ ಮೂಲಿಮನಿ, ನಜೀರಸಾಬ ಮೂಲಿಮನಿ, ಶಶಿಧರ ಕವಲಿ, ಪ್ರಾಚಾರ್ಯ ಡಾ. ಎಸ್ ವಿ ಡಾಣಿ, ಸಿ ಕೆ ಪಾಟೀಲ್, ಶಾಂತಪ್ಪ ಗುಜ್ಜಲ್, ದೇವಪ್ಪ ಗಂಗನಾಳ, ಆರ್ ಕೆ ಸುಬೇದಾರ, ಬಾಲಪ್ಪ ನಾಯಕ, ಬಿಇಒ ಉಮಾದೇವಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಮುಖಂಡರು, ಗಣ್ಯರು,ಯುವಕರು ಮಹಿಳೆಯರು, ಮಕ್ಕಳು ಸೇರಿದಂತೆ ವಾಲ್ಮೀಕಿ ನಾಯಕ ಸಮಾಜದ ಭಾಂದವರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಗ್ಯಾನಪ್ಪ ತಳವಾರ ಸಂಗಡಿಗರು ಪ್ರಾರ್ಥಿಸಿದರು.
ವೀರಪ್ಪ ಸ್ವಾಗತಿಸಿದರು.

ಮೆರವಣಿಗೆ : ಪಟ್ಟಣದ ಶ್ರೀ ಬುತ್ತಿಬಸವೇಶ್ವರ ದೇವಸ್ಥಾನದಿಂದ ಮಹರ್ಷಿ ವಾಲ್ಮೀಕಿ, ಬೇಡರ ಕಣ್ಣಪ್ಪ, ಗಂಡುಗಲಿ ಕುಮಾರರಾಮ, ವೀರಸಿಂಧೂರ ಲಕ್ಷ್ಮಣ , ವೀರಮದಕರಿ ನಾಯಕ ಸೇರಿದಂತೆ ಇತರ ಮಹಾನ್ಯ ನಾಯಕ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಚಾಲನೆ ನೀಡಿದರು. ಪಟ್ಟಣದ ವಿವಿದ ಪ್ರಮುಖ ವೃತ್ತಗಳ ಮೂಲಕ ತಾಲೂಕಾ ಕ್ರೀಡಾಂಗಣದಲ್ಲಿ ಬಂದು ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು, ವಾಲ್ಮೀಕಿ ಸಮಾಜದ ತಾಲೂಕಾ ಅಧ್ಯಕ್ಷ ಮಾನಪ್ಪ ತಳವಾರ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಮುಖಂಡರು, ಗಣ್ಯರು,ಯುವಕರು ಮಹಿಳೆಯರು, ಮಕ್ಕಳು ಸೇರಿದಂತೆ ವಾಲ್ಮೀಕಿ ನಾಯಕ ಸಮಾಜದ ಭಾಂದವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ

WhatsApp Group Join Now
Telegram Group Join Now
Share This Article
error: Content is protected !!