ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಸಾಮಾಜ ಸೇವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ತಾಲೂಕಿನ ದಯಾನಂದಪುರಿ ಕ್ರೀಡೆ, ಸಾಂಸ್ಕೃತೀಕ ಜಾನಪದ ಕಲಾ ಸಂಘ ಹಾಗೂ ಗಾಯತ್ರಿ ಮಹಿಳಾ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸೀಮಂತ ಕಾರ್ಯಕ್ರಮದಲ್ಲದ ಸನ್ಮಾನ ಸ್ವೀಕರಿಸಿ ಮಾತನಾಡಿದ
ಸಮಾಜ ಸೇವಕಿ ಹಾಗೂ ರಾಜ್ಯ ಯುವ ಪ್ರಶಸ್ತಿ ವಿಜೇತೆ ಜ್ಯೋತಿ ಗೊಂಡಬಾಳ ಹಿರಿಯರ ಮಾರ್ಗದರ್ಶನ ಪಡೆಯುವ ಮೂಲಕ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಬೇಕು ಮಹಿಳೆಯರು ಅಭಿವೃದ್ದಿ ಹೊಂದಲು ಹಲವಾರು ಅವಕಾಶಗಳು ಇದ್ದು ತಂದೆ, ತಾಯಿ ಹಿರಿಯರ ಸೂಕ್ತ ಮಾರ್ಗದರ್ಶನಗಳನ್ನು ಪಡೆದುಕೊಂಡು ಉತ್ತಮವಾದ ಸಾಧನೆಯನ್ನು ಮಾಡಬೇಕು ಎಂದರು.
ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ ದೇಶದಲ್ಲಿ ಇನ್ನೂ ಲಿಂಗ ಅಸಮಾನತೆಯು ಜೀವಂತವಾಗಿದೆ ಇದನ್ನು ಹೊಡೆದೊಡಿಸಲು ಮಹಿಳೆಯರು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು. ಹಾಗೂ ಮಹಿಳಾ ದಿನಾಚರಣೆಗಳು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗಬಾರದು ಸರಕಾರ ಗಂಡು ಹೆಣ್ಣಿಗೆ ಸಮಾನತೆ ಇದೆ ಎಂದು ಹೇಳುತ್ತಿದೆ ಆದರೆ ಅದು ಇನ್ನೂ ಸಂಪೂರ್ಣವಾಗಿ ಸಮಾನತೆಯು ಸಿಕ್ಕಿಲ್ಲ ವಿವಿಧ ಕ್ಷೇತ್ರಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ನೀಡಬೇಕಾಗಿದೆ ಎಂದರು.
ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ ಮಾತನಾಡಿ ನನ್ನ ಸೇವೆಯನ್ನು ಗುರುತಿಸಿ ಈ ಸಂಘದವರು ಪ್ರಶಸ್ತಿಯನ್ನು ನೀಡಿರುವದು ಬಹಳ ಸಂತಸದ ಸಂಗತಿಯಾಗಿದೆ. ಮಹಿಳೆಯರು ತಮ್ಮ ಮಕ್ಕಳಿಗೆ ಹೆಣ್ಣು ಮತ್ತು ಗಂಡು ಎಂಬ ಭೇಧವನ್ನು ಮಾಡದೆ ಉತ್ತಮವಾದ ಗುಣಾತ್ಮಕ ಶಿಕ್ಷಣವನ್ನು ಕೊಡಿಸಬೇಕು ಸಮಾಜದಲ್ಲಿ ಅಭಿವೃದ್ದಿಯ ಪತದತ್ತ ಸಾಗುವಂತೆ ಮಾಡಬೇಕು, ಗರ್ಭೀಣಿ ಮಹಿಳೆಯರು ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು ಎಂದರು.
ಪ್ರಶಸ್ತಿ ಪುರಸ್ಕೃತರು: ಶಾರದಾ ಶೆಟ್ಟರ, ಪ್ರಭಾವತಿ ದುತ್ತರಗಿ, ಜ್ಯೋತಿ ಗೊಂಡಬಾಳ, ಸಿರಿನ್ಬಾನು, ಗೀತಾ ಎಮ್, ಮಲ್ಲಿಕಾ ಗಾಧಾರಿ, ಲಕ್ಷ್ಮೀ ಗೋನಾಳ, ಸಾವಿತ್ರಿ ಶಿವನಗುತ್ತಿ, ಸರೋಜಿನಿ ರ್ಯಾಕಿ, ಶಾಂಭವಿ ಹಿರೇಮಠ, ಎಮ್ ಎಚ್ ಮುಲ್ಲಾ, ಸೌಮ್ಯ ಬೋದೂರು.
ಶಿಕ್ಷಕ ನಟರಾಜ ಸೋನಾರ್, ಪತ್ರಕರ್ತ ಮಂಜುನಾಥ ಗೊಂಡಬಾಳ, ಸಿದ್ರಾಮಪ್ಪ ಅಮರಾವತಿ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಪಟ್ಟಣ ಸಹಕಾರ ಬ್ಯಾಂಕಿನ ಉಪಾಧ್ಯಕ್ಷೆ ಭುವನೇಶ್ವರಿ ಹಿರೇಮಠ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ರವೀಂದ್ರ ನಂದಿಹಾಳ, ಸಲಿಮಾಬೇಗಂ ಅರಗಿದ್ದಿ, ಮಂಜೂರು ಇಲಾಹಿ ಬನ್ನು, ಪೂರ್ಣಿಮಾ ದೇವಾಂಗಮಠ, ಗಾಯತ್ರಿ ಕುದುರಿಮೋತಿ, ಶಂಕ್ರಮ್ಮ ಕೊಳ್ಳಿ, ಶ್ರೀನಿವಾಸ ಕಂಟ್ಲಿ, ನಾಗರಾಜ ಕಾಳಗಿ, ರುಕ್ಮೀಣಿ ನಾಗಶೆಟ್ಟಿ,ಶಶಿಕಲಾ ಅರಳಿಕಟ್ಟಿ, ಅಮರೇಶ ತಾರಿವಾಳ, ನಬಿಸಾಬ ಇಲಕಲ್, ಸೇರಿದಂತೆ ಹಲವರು ಇದ್ದರು.