ಕುಷ್ಟಗಿ:- ತಾಲೂಕಿನ ಕಂದಕೂರ ಗ್ರಾಮದಲ್ಲಿ ತಾಯಿ ಭುವನೇಶ್ವರಿಯ ಫೋಟೋ ಮೆರವಣಿಗೆಯನ್ನು ದಿನಾಂಕ 21-11- 2025 ರಂದು ಬೆಳಿಗ್ಗೆ ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೆತಕರು ಹಾಗೂ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ದೊಡ್ದನಗೌಡ ಎಚ್ ಪಾಟೀಲ ಚಾಲನೆ ನೀಡಿದರು.
ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರತಿಬಾ ಪುರಸ್ಕಾರ ವಿವಿಧ ಸಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳು ಮತ್ತು ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ತಾಲೂಕ ಘಟಕದ ಅಧ್ಯಕ್ಷರಾದ ಮಾರುತಿ ಹಲಗಿ ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆ ಮಹೇಶ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.

ಉದ್ಘಾಟನೆಯ ನಂತರ ಮಾತನಾಡಿ ಕನ್ನಡದ ನೆಲ ಭಾಷೆ ಜಲಕ್ಕಾಗಿ ನಾವು ನೀವೆಲ್ಲರೂ ಶ್ರಮಿಸೋಣ ಎಂದರು. ಕರ್ನಾಟಕದ ಗಡಿ ಭಾಗದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹಲವಾರು ಕನ್ನಡ ವಿರೋಧಿಗಳು ಕರಾಳ ದಿನವನ್ನಾಗಿ ಆಚರಿಸಲು ಹೊರಟಿದ್ದು ಇದು ಬಹಳ ವಿಷಾದನೀಯ ಸಂಗತಿ. ಇಂತಹ ಸಂದರ್ಭದಲ್ಲಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡದ ನೆಲ ಜಲ ಭಾಷೆಗಾಗಿ ಕರಾಳ ದಿನವನ್ನಾಗಿ ಆಚರಿಸುವ ಎಂಇಎಸ್ ಪುಂಡರಿಗೆ ಬುದ್ದಿ ಕಲಿಸುವಂತಹ ಆಗಬೇಕು ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಜೀವನ್ ಸಾಬ್ ಬಿನ್ನಾಳರವರು ಮಾತನಾಡಿ ಕನ್ನಡವನ್ನು ಬೆಳೆಸುವ ಅಗತ್ಯ ಇಲ್ಲ ಕನ್ನಡವನ್ನು ಉಳಿಸು ಅಗತ್ಯ ನಮ್ಮ ನಿಮ್ಮೆಲ್ಲರಿಗೆ ಇದೆ. ನೂರಾರು ವರ್ಷಗಳ ಹಿಂದೆ ಕನ್ನಡವನ್ನು ಕಟ್ಟಿ ಬೆಳೆಸಿ ಕನ್ನಡದ ಬಾವುಟವನ್ನು ರಾರಾಜಿಸಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇಂದಿನ ಯುವಕರಲ್ಲಿ ಭಜನಾ ಪದಗಳು ಗಿಗಿ ಪದಗಳು ಚೌಡಕಿ ಪದಗಳು ಒಡಪುಗಳು ಗ್ರಾಮೀಣ ಕ್ರೀಡೆಗಳು ನಮ್ಮ ನಿಮ್ಮೆಲ್ಲರ ಮಧ್ಯೆ ಕಡಿಮೆಯಾಗಿದೆ
ಗ್ರಾಮೀಣ ಕ್ರೀಡೆಗಳು ಮತ್ತು ಭಜನಾ ಪದಗಳು ಗೀಗಿ ಪದಗಳು ಹಿರಿಯರ ಮನೆತನದಲ್ಲಿ ಇವತ್ತಿಗೂ ಸಂದರ್ಭಕ್ಕೆ ತಕ್ಕ ಹಾಗೆ ಮಾತನಾಡುತ್ತಿರುವುದು ಗಮನಿಸಿದಾಗ ಮಾತ್ರ ನಮಗೆ ಗೊತ್ತಾಗುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ರಾಜ್ಯೋತ್ಸವವನ್ನು ಕಂದಕೂರ ಗ್ರಾಮಸ್ಥರು ಹಾಗೂ ಕರವೇ ಕುಟುಂಬದ ಎಲ್ಲಾ ಸದಸ್ಯರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ ಮತ್ತು ಕಾರ್ಯಕ್ರಮಕ್ಕೆ ತನು ಮನ ಧನದಿಂದ ಸಹಾಯ ಮಾಡಿದ ಎಲ್ಲಾ ಕನ್ನಡ ಮನಸುಗಳಿಗೆ ಕರವೇ ತಾಲೂಕ ಘಟಕದ ಅಧ್ಯಕ್ಷ ಮಾರುತಿ ಹಲಗಿ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಕನ್ನಡ ರಕ್ಷಣೆಗಾಗಿ ಹೋರಾಟ ಮಾಡುತ್ತಾ ನಾವು ರಕ್ಷಣ ಮಾಡುವ ಅಗತ್ಯವಿದೆ ಮತ್ತು ನವೆಂಬರ್ ತಿಂಗಳಲ್ಲಿ ಪ್ರತಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಜ್ಜಪ್ಪ ಕರಡಕಲ ಮಾತನಾಡಿದರು. ಇದೆ ಸಂದರ್ಭದಲ್ಲಿ ಅಜ್ಜಪ್ಪ ಕರಡಕಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೂರಗಮ್ಮ ಸತ್ಯಪ್ಪ ಹಾದಿಮನಿ ರುದ್ರಗೌಡ ಮಾಲಿಯ ಪಾಟೀಲ ಗ್ರಾಮ ಘಟಕದ ಅಧ್ಯಕ್ಷರಾದ ರಾಜು ಸುಬೇದಾರ ಆರ್ ಶರಣಪ್ಪ ಗುಮಗೇರಾ ಕಂದಕೂರಪ್ಪ ವಾಲ್ಮೀಕಿ ಚ0ದ್ರಹಾಸ ಬಾವಿಕಟ್ಟಿ ಡಾ.ಎಸ್ ವೈ ಚೆನ್ನಿ ಶರಣಪ್ಪ ಬಿಜಕಲ್ ಬಸವರಾಜ ಕಾಮನೂರ ಶರಣಪ್ಪ ಗೋಪಾಳಿ ಶರಣಯ್ಯ ಅಬ್ಬಿಗೇರಿ ರಾಜಶೇಖರ ಶ್ಯಾಗೋಟಿ ಗ್ರಾಮ್ ಪಂಚಾಯತ್ ಸರ್ವ ಸದಸ್ಯರು ಮತ್ತು ಗ್ರಾಮ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರ್ವ ಪಧಾದಿಕಾರಿಗಳು ಹಿರಿಯರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ



