ಅನ್ನಪೂರ್ಣಾ ಸ್ಮರಣೋತ್ಸವದಲ್ಲಿ ಮಳಗಲಿಯವರ 7 ಕೃತಿಗಳ ಲೋಕಾರ್ಪಣೆ

Murugesh Shivapuji
WhatsApp Group Join Now
oplus_0

ಬೆಳಗಾವಿ; ದಿ. ಅನ್ನಪೂರ್ಣಾ ಮಳಗಲಿ ಅವರ ಸ್ಮರಣೋತ್ಸವದಲ್ಲಿ ಅವರ ಪತಿ ಅಶೋಕ ಮಳಗಲಿ ಅವರ 7 ಕೃತಿಗಳ ಲೋಕಾರ್ಪಣೆಗೊಂಡಿದ್ದು ಅನುಕರಣೀಯವಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ನೀವ್ರತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ಹೇಳಿದರು.
ಅವರಿಂದು ಬೆಳಗಾವಿಯಲ್ಲಿ ದಿ.ಅನ್ನಪೂರ್ಣಾ ಮಳಗಲಿ ಅವರ ಸ್ಮರಣೋತ್ಸವದಲ್ಲಿ ಮಾತನಾಡಿ ಸದಾ ಹಸನ್ಮುಖಿಯಾಗಿದ್ದ ದೇಹದಾನಿ ದಿ.ಅನ್ನಪೂರ್ಣಾ ಅವರು ಪತಿಗೆ ಸ್ಪೂರ್ತಿದಾಯಕವಾಗಿದ್ದರು.ನಿತ್ಯ ನೂತನ ದಾಂಪತ್ಯ ಬದುಕು ಅವರದಾಗಿತ್ತು,ಅವರ ಸಾವಿನಲ್ಲೂ ಸ್ಪೂರ್ತಿ ಪಡೆದು 7 ಕೃತಿಗಳ ಲೋಕಾರ್ಪಣೆ ಮಾಡಿ ಸಾವಿನ ನಂತರವೂ ಅವರು ಬದುಕಿದ್ದಾರೆ ಎಂಬುದನ್ನು ಅಶೋಕ್ ಮಳಗಲಿ ಸಾಬೀತುಪಡಿಸಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಕೃತಿಗಳ ಲೋಕಾರ್ಪಣೆ ಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೋ.ಸಿದ್ದು ಯಾಪಲಪರವಿ ಮಾತನಾಡಿ ಸಂಬಂಧಗಳು ಹಾಳಾಗಿರುವ, ಸೌಜನ್ಯವನ್ನು ಮೆರೆಯುತ್ತಿರುವ ಈ ದಿನ ಮಾನಗಳಲ್ಲಿ ಸಾವಿನಲ್ಲೂ ಸಾರ್ಥಕತೆ ಮೆರೆದ, ಸಮೂಹ ಪ್ರಜ್ಞೆಯಲ್ಲಿ ಬದುಕಿದ ಮಳಗಲಿ ದಂಪತಿಗಳದು ಮಾದರಿ ದಾಂಪತ್ಯ ಎಂದರು.
ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾತು ಮೌನ ಮತ್ತು ಅಪವಾದದ ಸುಳಿಯಲ್ಲಿ ಆದರ್ಶದ ಒರತೆ ಕೃತಿಗಳ ಕುರಿತು ಡಾ. ನಿರ್ಮಲ ಬಟ್ಟಲ ಮಾತನಾಡಿದರು. ಅಂತರಂಗದ ಬೆಳಕು ಮತ್ತು ಲಿಂಗಾಯತ ಧರ್ಮದ ತ್ರಿವಿಧ ತತ್ವಗಳು ಕೃತಿಗಳ ಕುರಿತು ಡಾ.ಅವಿನಾಶ ಕವಿ ಮಾತನಾಡಿದರು. ಕಾಲಾತೀತ ಕಲ್ಯಾಣ ಕೃತಿ ಕುರಿತು ಡಾ.ಎಚ್.ಐ.ತಿಮ್ಮಾಪೂರ ಮಾತನಾಡಿದರು.ಅರಬರ ನಾಡಿನ ಅದ್ಭುತಗಳು ಕೃತಿ ಕುರಿತು ಸಾಹಿತಿ ಯು.ರು.ಪಾಟೀಲ ಮಾತನಾಡಿದರು. ಲಂಡನ್ ನಿಂದ ರೋಮವರೆಗೆ ಸ್ಮರಣೆಯ ಪಯಣ ಕೃತಿ ಕುರಿತು ಡಾ.ಪಿ.ಜಿ.ಕೆಂಪಣ್ಣವರ ಮಾತನಾಡಿದರು.
ಹಿರಿಯ ಸಾಹಿತಿ, ಪತ್ರಕರ್ತ ಎಲ್.ಎಸ್.ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಹಿರಿಯ ವೈದ್ಯ ಡಾ.ಎಂ.ಎಲ್.ತುಕ್ಕಾರ,ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಅಶೋಕ ಮಳಗಲಿ ಸ್ವಾಗತಿಸಿದರು.ಶರಣೆ ಪ್ರೇಮಕ್ಕ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ನಂತರ ಅಶೋಕ ಮಳಗಲಿ ವಿರಚಿತ ಹೊನ್ನು ಮಣ್ಣಾದಾಗ ನಾಟಕ ಪ್ರದರ್ಶನಗೊಂಡಿತು.ನಾಟಕ ಅಕಾಡೆಮಿ ಸದಸ್ಯ ಬಾಬಾಸಾಹೇಬ ಕಾಂಬಳೆ ನಿರ್ದೇಶಿಸಿದರು. ಪ್ರೋ.ಬಿ.ಆರ್. ಪೋಲಿಸ್ ಪಾಟೀಲ್ ಉದ್ಘಾಟಿಸಿದರು. ರಂಗಾಯಣ ಸಂಚಾಲಕ ಝಾಕೀರ್ ನದಾಫ್ ಅಧ್ಯಕ್ಷತೆ ವಹಿಸಿದ್ದರು.
ಶಿರೀಶ್ ಜೋಶಿ, ಚಂದ್ರಶೇಖರ್ ನವಲಗುಂದ, ಆನಂದ ಪುರಾಣಿಕ, ಮುರಿಗೆಪ್ಪ ಬಾಳಿ, ಚಂದ್ರಪ್ಪ ಬೂದಿಹಾಳ ಬಸವರಾಜ್ ಗಾರ್ಗಿ ಉಪಸ್ಥಿತರಿದ್ದರು. ಮಹಾಲಕ್ಷ್ಮಿ ವಿಕಾಸ್ ಮಳಗಲಿ ವಂದಿಸಿದರು. ಹೇಮಾ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.

WhatsApp Group Join Now
Telegram Group Join Now
Share This Article
error: Content is protected !!