ಬೆಳಗಾವಿ : ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಎಲ್.ಎಂ ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಬಸವರಾಜ ರೊಟ್ಟಿ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಅರಿವಿಂದ ಪರುಶೆಟ್ಟಿ ಹಾಗೂ ಮಹಾನಂದಾ ಪರುಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಮಹಿಳಾ ಘಟಕದ ಅಧ್ಯಕ್ಷೆ ರತ್ನಕ್ಕ ಬೆಣಚನಮರಡಿ ವೇದಿಕೆಯ ಮೇಲಿದ್ದರು. ಈರಣ್ಣ ಚಿನಗುಡಿ, ಡಾ. ಅಡಿವೆಪ್ಪ ಇಟಗಿ, ಪ್ರೊ ವೀರುಪಾಕ್ಷ ದೊಡಮನಿ ಅವರು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀ ಅವರ ಕುರಿತು ಮಾತನಾಡಿದರು. ಮುರಿಗೆಪ್ಪ ಬಾಳಿ ಸ್ವಾಗತಿಸಿದರು. ಸಿ.ಎಂ ಬೂದಿಹಾಳ ಕಾಯಕ್ರಮ ನಿರೂಪಿಸಿದರು. ಅಶೋಕ ಮಳಗಲಿ, ಮುರಗೇಶ ಶಿವಪೂಜಿ, ಪ್ರವೀಣಕುಮಾರ ಚಿಕಲಿ, ಎಸ್ಎಸ್ ಪೂಜಾರ, ಬಸವರಾಜ ಮತ್ತಿಕೊಪ್ಪ, ಕೆಂಪಣ್ಣಾ ರಾಮಾಪುರಿ ಮುಂತಾದ ಪದಾಧಿಕಾರಿಗಳು, ಶರಣರು ಉಪಸ್ಥಿತರಿದ್ದರು.
ಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

WhatsApp Group
Join Now


