27 ರಂದು ಸಚಿವ ಸವದಿ ಅವರ ಅಭಿನಂದನಾ ಸಮಾರಂಭ

Murugesh Shivapuji
27 ರಂದು ಸಚಿವ ಸವದಿ ಅವರ ಅಭಿನಂದನಾ ಸಮಾರಂಭ
WhatsApp Group Join Now

ಬೆಳಗಾವಿ; ರಾಜ್ಯದ ಸಹಕಾರ ಸಚಿವ ಲಕ್ಷ್ಮಣ್ ಸವದಿ ಅವರ ಅಭಿನಂದನ ಸಮಾರಂಭವನ್ನು ಇದೆ ರವಿವಾರ ದಿನಾಂಕ 27ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ಸಂಜೆ 4-00 ಗಂಟೆಗೆ ಬೆಳಗಾವಿ ಜಿಲ್ಲೆಯ ಬಸವ ಜಯಂತಿ ಉತ್ಸವ ಸಮಿತಿ-2026 ಪರವಾಗಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದು ಸಾನಿದ್ಯದಲ್ಲಿ ಬೆಳಗಾವಿ ಕಾರಂಜಿ ಮಠದ ಶ್ರೀ. ಗುರುಸಿದ್ಧ ಮಹಾಸ್ವಾಮೀಜಿಯವರು, ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಯಮಕನಮರಡಿಯ ಶೂನ್ಯ ಸಂಪಾದನಾ ಮಠದ ಶ್ರೀ.ಸದ್ಗುರು ಸಿದ್ದ ಬಸವ ದೇವರು ಉಪಸ್ಥಿತರಿರಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಶ್ರೀ.ಎ.ಬಿ. ಪಾಟೀಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಶ್ರೀ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಶ್ರೀ.ಪ್ರಕಾಶ್ ಹುಕ್ಕೇರಿ, ಶಾಸಕಿ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾ ಸಾಹೇಬ್ ಜೊಲ್ಲೆ, ಮಾಜಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಂಸದೆ ಶ್ರೀಮತಿ ಮಂಗಳಾ ಅಂಗಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿ ಮಠ, ಮಾಜಿ ಲೋಕಸಭಾ ಸದಸ್ಯ ರಮೇಶ್ ಕತ್ತಿ , ಶಾಸಕಿ ಶ್ರೀಮತಿ. ಶಶಿಕಲಾ ಜೊಲ್ಲೆ, ಶಾಸಕರಾದ ಅಶೋಕ್ ಪಟ್ಟಣ, ಮಹಾಂತೇಶ್ ಕೌಜಲಗಿ, ಬಾಬಾ ಸಾಹೇಬ್ ಪಾಟೀಲ್, ನಿಖಿಲ್ ಕತ್ತಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ಶಶಿಕಾಂತ್ ನಾಯಕ್, ಮಾಜಿ ಶಾಸಕರಾದ ಮಹಾಂತೇಶ ದೊಡ್ಡ ಗೌಡರ್, ವಿಶ್ವನಾಥ ಪಾಟೀಲ್, ಜಗದೀಶ್ ಮೆಟಗುಡ್ , ಎಸ್ ಸಿ ಮಾಳಗಿ, ಬೆಳಗಾವಿ ಮೇಯರ್ ಶ್ರೀಮತಿ ಪ್ರೀತಿ ಕಾಮಕರ್, ಡೆಪ್ಯುಟಿ ಮೇಯರ್ ಹನುಮಂತ ಕೊಂಗಾಲಿ ಇವರುಗಳು ಆಗಮಿಸಲಿದ್ದಾರೆ.
ಮಲ್ಲಣ್ಣ ಯಾದವಾಡ, ಡಾ. ಮಹಾಂತೇಶ್ ಕಡಾಡಿ, ಮುರುಗೇಂದ್ರ ಪಾಟೀಲ್, ಡಾ. ರವಿ ಪಾಟೀಲ್, ಉಮೇಶ್ ಬಾಳಿ, ಮನೋಹರ್ ಪುಡಕಲಕಟ್ಟಿ , ಶಿವಗೌಡ ಪಾಟೀಲ್, ಜಗದೀಶ್ ಪೂಜಾರಿ ಮತ್ತು ಪಂಚನಗೌಡ ದ್ಯಾಮನಗೌಡರ್ ಆಗಮಿಸಲಿದ್ದು ಎಲ್ಲ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಬೆಳಗಾವಿ ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿಯ-2026 ಅಧ್ಯಕ್ಷ ಬಸವರಾಜ ರೊಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!