ಸಾಲುಮರದ ತಿಮ್ಮಕ್ಕನವರ ಜೀವನ ನಮಗೆಲ್ಲ ಆದರ್ಶ:ಪಾಂಡು ಗೂಳನ್ನವರ

Prasanna Kumbar
WhatsApp Group Join Now

ಖಾನಾಪುರ:ಕರ್ನಾಟಕ ಯುವ ರಕ್ಷಣಾ ವೇದಿಕೆ,ಗಡಿನಾಡು ಹಿತರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ನಿಧನ ಹೊಂದಿದ ಸಾಲುಮರದ ತಿಮ್ಮಕ್ಕನವರಿಗೆ ಖಾನಾಪುರದ ಕೌಂದಲ ಗ್ರಾಮದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಸಸಿ ನೆಟ್ಟು ನೀರುಣಿಸುವದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ಯುವ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಪಾಂಡು ಗೂಳನ್ನವರ ಸಾಲುಮರದ ತಿಮ್ಮಕ್ಕನವರ ಜೀವನ ನಮಗೆಲ್ಲ ಆದರ್ಶ ಅವರ ನೆಟ್ಟ ಮರಗಳನ್ನ ತಮ್ಮ ಮಕ್ಕಳಂತೆ ನೋಡಿಕೊಂಡು ಸುಮಾರು ನಾಲ್ಕು ಕಿಲೋಮೀಟರ್ ಉದ್ದಕ್ಕೂ ಹೆಗಲ ಮೇಲೆ ನೀರು ಹೊತ್ತು ಉಣಿಸಿದ್ದಾರೆ ಅವರಂತೆ ನಾವು ಕೂಡ ಒಬ್ಬೊಬ್ಬರೂ ಒಂದೊಂದು ಮರ ನೆಟ್ಟು ಅವರು ಕಂಡ ಕನಸನ್ನ ನನಸು ಮಾಡಬೇಕಾಗಿದೆ ಎಂದರು.

ಸಾಲುಮರದ ತಿಮ್ಮಕ್ಕನವರು ತಮ್ಮ ಇಪ್ಪತ್ತೈನದನೇ ವಯಸ್ಸಿಗೆ ಮದುವೆಯಾದರು ಆದರೆ ಸುಮಾರು ದಿನ ಕಳೆದರೂ ಮಕ್ಕಳಾಗದಿದ್ದಾಗ ತನ್ನ ಪತಿಯ ಸಲಹೆಯಂತೆ ಮರಗಳಲ್ಲೇ ಮರಗಳನ್ನ ಕಾಣಲು ತಿಪಟೂರಿನಿಂದ ಕಡೂರು ಹೋಗುವ ರಸ್ತೆಯ ಎರಡು ಬದಿಯಲ್ಲಿ ಮರ ನೆಟ್ಟು ತಮ್ಮ ಮಕ್ಕಳಂತೆ ಬೆಳೆಸಿ ಸಮಾಜಕ್ಕೆ ಆದರ್ಶಪ್ರಾಯರಾದರು ಅವರ ಸಾಧನೆಗೆ ಮೆಚ್ಚಿ ಭಾರತ ಸರಕಾರ 2019ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು ಎಂದು ಗಡಿನಾಡು ಹಿತರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಾಜು ಖಾತೇದಾರ ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಸನ್ನ ಕುಂಬಾರ,ಸದಸ್ಯ ಜಾವೇದ ಮೊಕಾಶಿ, ನೇಗಿಲಯೋಗಿ ರೈತ ಸುರಕ್ಷಾ ಸಂಘದ ರುದ್ರಗೌಡ ಪಾಟೀಲ ಹಾಗೂ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!