ಮಾನವೀಯತೆ ಮರೆತ ಬೀಡಿ ಸರಕಾರಿ ಆಸ್ಪತ್ರೆ ಸಿಬ್ಬಂದಿ

Prasanna Kumbar
WhatsApp Group Join Now

ಗಡಿ ಕನ್ನಡಿಗ

ಖಾನಾಪುರ: ವೈದ್ಯೋ ನಾರಾಯಣಿ ಹರಿ ಅಂತಾರೆ ಆದರೆ ಬೀಡಿ ಸರಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುವಿಲ್ಲ ಅನಿಸತ್ತೆ ರಾತ್ರಿ ಆಸ್ಪತ್ರೆಗೆ ಬಂದ ಮಗುವನ್ನ ಪ್ರಥಮ ಚಿಕಿತ್ಸೆ ನೀಡದ ಸಿಬ್ಬಂದಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಹೌದು ಹಾವೇರಿಯಿಂದ ಕೆಲಸ ಅರಸಿಕೊಂಡ ಬೀಡಿಗೆ ಬಂದು ನೆಲೆಸಿರುವ ಕುಟುಂಬವೊಮನದರ ಒಂದು ವರ್ಷದ ಮಗು ಬುದುವಾರ ರಾತ್ರ ಏಕಾಏಕಿ ಅಸ್ವಸ್ಥಗೊಂಡಿದೆ ರಾತ್ರಿಯಾಗಿದ್ದರಿಂದ ಮತ್ತು ಖಾಸಗಿ ಆಸ್ಪತ್ರೆಗೆ ಹೋಗಲು ಅಶಕ್ತವಾಗಿದ್ದ ಕುಟುಂಬ ಬೀಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಆದರೆ ರಾತ್ರಿ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಕನಿಷ್ಠ ಆಸ್ಪತ್ರೆ ಬಾಗಿಲು ತೆಗೆದು ಪ್ರಥಮ ಚಿಕಿತ್ಸೆಯನ್ನೂ ನೀಡದೆ ಅಮಾನವೀಯತೆ ಮೆರೆದಿದ್ದಾರೆ ರಾತ್ರಿ ಆಸ್ಪತ್ರೆಯಲ್ಲಿದ್ದ ನರ್ಸಿಂಗ್ ಸಿಬ್ಬಂದಿ ಆಸ್ಪತ್ರೆಯ ಬೀಗವನ್ನೂ ತೆಗೆಯದೆ ನಮಗೆ ನೋಡಲು ಆಗುವದಿಲ್ಲ ನೀವು ನಂದಗಡಕ್ಕೆ ಕರೆದುಕೊಂಡು ಹೋಗಿ ಎಂದು ಕುಟುಂಬವನ್ನ ಹೆದರಿಸಿದ್ದಾರೆ.

ತಡರಾತ್ರಿ ವಾಹನ ವ್ಯವಸ್ಥೆ ಇಲ್ಲದ ಬಡ ಕುಟುಂಬ ಕಂಗಾಲಾಗಿದ್ದು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪತ್ರಕರ್ತ ನಾಗೇಶ ನಾಯ್ಕರ್ ಸಿಬ್ಬಂದಿಗಳಿಗೆ ಮನವಿ ಮಾಡಿದರೂ ಆಸ್ಪತ್ರೆ ಸಿಬ್ಬಂದಿ ಕರಗದಿದ್ದಾಗ ತಮ್ಮ ವಾಹನದ ಮೇಲೆ ಮಗುವನ್ನ ಖಾನಾಪುರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದ್ದು ಆಸ್ಪತ್ರೆ ಸಿಬ್ಬಂದಿ ಮೇಲೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದ ಪತ್ರಕರ್ತನ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಶಹಬ್ಬಾಶ್ ಎಂದಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!