ಗಡಿ ಕನ್ನಡಿಗ

ಖಾನಾಪುರ: ಪಟ್ಟಣದಲ್ಲಿರುವ ಪಟ್ಟಣ ಪಂಚಾಯತ ಹಾಗೂ ತಾಲ್ಲೂಕು ಪಂಚಾಯತಿ ವಾಣಿಜ್ಯ ಕಟ್ಟಡಗಳ ಟೆಂಡರ್ ಕರೆದು ದಶಕಗಳೇ ಕಳೆದಿವೆ ಅಲ್ಲದೇ ಈ ಹಿಂದೆ ಬಾಡಿಗೆ ಪಡೆದ ಬಾಕಿದಾರರು ಲಕ್ಷ ಲಕ್ಷ ಬಾಡಿಗೆ ಕಟ್ಟದೇ ಇದ್ದರೂ ಸುಮ್ಮನಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪೌರಾಡಳಿತ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಗೆ ಸಮಾಜ ಸೇವಕ ಜಾವೇದ ಮೊಕಾಶಿ ದೂರು ಸಲ್ಲಿಸಿದ್ದಾರೆ.
ಸರ್ಕಾರಕ್ಕೆ ಆದಾಯ ತಂದು ಕೊಡುವ ಉದ್ದೇಶದಿಂದ ಆಯಾ ಇಲಾಖೆ ಅನುದಾನದಲ್ಲಿ ವಾಣಿಜ್ಯ ಮಳಿಗೆಗಳನ್ನ ತೆರೆದು ಬಾಡಿಗೆ ನೀಡಲಾಗಿದೆ ಆದರೆ ನಿಯಮಾನುಸಾರ ಐದು ವರ್ಷಗಳಿಗೊಮ್ಮ ಟೆಂಡರ್ ಕರೆಯಬೇಕು ಮತ್ತು ಟೆಂಡರ್ ನಲ್ಲಿ ಬಾಡಿಗೆ ಪಡೆದ ಹಾಗೆ ಆಯಾ ಇಲಾಖೆಗೆ ಪ್ರತೀ ತಿಂಗಳು ಬಾಡಿಗೆ ಕಟ್ಟಬೇಕು ಆದರೆ ಇಲ್ಲಿ ಯಾವ ಮಳಿಗೆಯವರೂ ಬಾಡಿಗೆ ಕಟ್ಡುತ್ತಿಲ್ಲ ಅದನ್ನ ಅಧಿಕಾರಿಗಳು ಕೇಳುತ್ತಿಲ್ಲ ಇದರಿಂದ ಸರಕಾರದ ಬೊಕ್ಕಸಕ್ಕೆ ಲಕ್ಷ ಲಕ್ಷ ನಷ್ಟ ಉಂಟಾಗುತ್ತಿದ್ದು ಇದಕ್ಕೆಲ್ಲ ತಾಲ್ಲೂಕು ಹಾಗೂ ಪಟ್ಟಣ ಪಂಚಾಯತ ಅಧಿಕಾರಿಗಳೇ ನೇರ ಹೊಣೆ ಅದಕ್ಕಾಗಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಜಾಂಬೋಟಿ ಕ್ರಾಸನಲ್ಲಿರುವ ಪಟ್ಡಣ ಪಂಚಾಯತಿಯ ಹದಿನಾಲ್ಕು ವಾಣಿಜ್ಯ ಮಳಿಗೆಗಳು ಮತ್ತು ಸರಕಾರಿ ಆಸ್ಪತ್ರೆ ಮುಂದಿರುವ ತಾಲ್ಲೂಕು ಪಂಚಾಯತ ಮಳಿಗೆಗಳ ಟೆಂಡರ್ ಪ್ರಕ್ರಿಯೆ ನಡೆದು ದಶಕಗಳೇ ಕಳೆದಿವೆ ಹೊಸದಾಗಿ ಟೆಂಡರ್ ಕರೆಯಬೇಕು ಮತ್ತು ಈ ಹಿಂದೆ ವಾಣಿಜ್ಯ ಮಳಿಗೆ ಬಾಡಿಗೆ ಪಡೆದು ಅವುಗಳನ್ನ ಬೇರೆಯವರಿಗೆ ಬಾಡಿಗೆ ನೀಡಿ ದುಪ್ಪಟ್ಡು ಬಾಡಿಗೆ ಪಡೆಯುತ್ತಿದ್ದು ಅಧಿಕಾರಿಗಳ ಗಮನಕ್ಕೆ ಬಂದರೂ ಕ್ರಮ ಕೈಗೊಳ್ಳದಿರುವದನ್ನ ನೋಡಿದರೆ ಇದರಲ್ಲಿ ಅಧಿಕಾರಿಗಳಿಗೂ ಪಾಲಿದೆಯಾ ಎಂಬ ಪ್ರಶ್ಬೆ ಮೂಡುತ್ತದೆ ಹೀಗಾಗಿ ಇನ್ನೊಂದು ವಾರದಲ್ಲಿ ಬಾಕಿ ಬಾಡಿಗೆ ಹಣ ವಸೂಲಿ ಮಾಡಬೇಕು ಜೊತೆಗೆ ಹೊಸ ಟೆಂಡರ್ ಕರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.


