ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ 

Murugesh Shivapuji
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ 
WhatsApp Group Join Now

ಬೆಳಗಾವಿ – ನಿವೃತ್ತ ಜಿಲ್ಲಾ ನ್ಯಾಯಾಧೀಶ, ಕವಿ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ ಜಿನದತ್ತ ದೇಸಾಯಿಯವರು ಬರೆದಂತೆ ಬದುಕಿದವರು ಸಮಾಜಕ್ಕೆ ಬಹುಮುಖ್ಯ ಕೊಡುಗೆಗಳನ್ನು ನೀಡಿದ ಕಾರ್ಯ ನಮಗೆಲ್ಲ ಮಾದರಿ ಎಂದು ಪ್ರಾ ಬಿ ಎಸ್ ಗವಿಮಠ ನುಡಿದರು ಅವರು ಇಂದು ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಡಾ ಜಿನದತ್ತ ದೇಸಾಯಿಯವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಜನೋಪಕಾರಿ ದೇಸಾಯಿಯವರು ರಾಜ್ಯೋತ್ಸವದ ದಿನದಂದೆ ನಮ್ಮನ್ನು ಅಗಲಿರುವುದು ಕಾಕತಾಳೀಯ ಅವರ ಉನ್ನತ ಚಿಂತನೆಗಳು ಅವರ ಬರವಣಿಗೆಯಲ್ಲಿ ಸದಾ ಶಾಸ್ವತವಾಗಿರುತ್ತವೆ ಎಂದು ಅಭಿಪ್ರಾಯ ಪಟ್ಟರು
ನೃಪತುಂಗ ಪ್ರಶಸ್ತಿ ಭೂಷಿತ ಕವಿ ಡಾ ಸರಜು ಕಾಟ್ಕರ ಜಿನದತ್ತ ದೇಸಾಯಿಯವರಿಗೆ ಗೌರವ ಡಾಕ್ಟರೇಟ್ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಬಂದಾಗ ನಾನು ಆಯಾ ಸಮಿತಿಗಳ ಸದಸ್ಯನಾಗಿದ್ದದ್ದು ಒಂದು ಯೋಗಾಯೋಗವೆಂದು ನೆನಪಿಸಿಕೊಂಡರು
ಹಿರಿಯ ಸಾಹಿತಿಗಳಾದ ಪಿ ಬಿ ಸ್ವಾಮಿ ನೀಲಗಂಗಾ ಡಾ ತಿಮ್ಮಾಪೂರ ಎ ಎ‌ ಸನದಿ ರವಿ ಕೊಟಾರಗಸ್ತಿ ಶ್ರೀರಂಗ ಜೋಶಿ ದೀಪಿಕಾ ಚಾಟೆ ಡಾ ಕೋಲ್ಕಾರ ಜಿನದತ್ತ ದೇಸಾಯಿಯರ ಒಡನಾಟವನ್ನು ಹಂಚಿಕೊಂಡರು
ಆರ್ ಬಿ ಕಟ್ಟಿ ಜಿ ಎಸ್ ಸೋನಾರ ಆನಂದ ಪುರಾಣಿಕ ಎಂ ಎ ಪಾಟೀಲ ಉಪಸ್ಥಿತರಿದ್ದರು
ಬಸವರಾಜ ಗಾರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು ಶ್ರೀ ನವಲಗುಂದ ವಂದಿಸಿದರು

WhatsApp Group Join Now
Telegram Group Join Now
Share This Article
error: Content is protected !!