ಬೆಳಗಾವಿಯ ಭಿಮ್ಸ ಪ್ರಾಂಶುಪಾಲ ಡಾ.ಪ್ರಕಾಶ ಕೊಡ್ಲಿಯವರಿಗೆ “ಕರ್ನಾಟಕ ಎಕ್ಸಲೆನ್ಸ ಅವಾರ್ಡ”

Prasanna Kumbar
WhatsApp Group Join Now

ಗಡಿ ಕನ್ನಡಿಗ

ಬೆಳಗಾವಿ:ರಾಜ್ಯದ ನರ್ಸಿಂಗ್ ಶಿಕ್ಷಣ ಕ್ಷೇತ್ರದ ಗಣನೀಯ ವ್ಯಕ್ತಿತ್ವವಾಗಿರುವ ಡಾ. ಪ್ರಕಾಶ ಕೊಡ್ಲಿ ಅವರಿಗೆ “ಕರ್ನಾಟಕ ಎಕ್ಸಲೆನ್ಸ್ ಅವಾರ್ಡ್ 2026” ಅನ್ನು ರಾಷ್ಟ್ರೀಯ ಎಕ್ಸಲೆನ್ಸ್ ಕೌನ್ಸಿಲ್ (NEC) ವತಿಯಿಂದ ಪ್ರದಾನಿಸಲಾಯಿತು.
ಬೆಂಗಳೂರು ಟೌನ್ ಹಾಲ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕನ್ನಡ ಚಿತ್ರ ನಟಿ ಶೃತಿ, ವಿವಿಧ ಗಣ್ಯರು, ಅಧಿಕಾರಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.

ಬೆಳಗಾವಿಯ ಬಿಮ್ಸನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಕಾಶ ಕೊಡ್ಲಿ ಅವರು ಆರೋಗ್ಯ ಸೇವೆ, ನರ್ಸಿಂಗ್ ಶಿಕ್ಷಣ ಹಾಗೂ ವೈದ್ಯಕೀಯ ಸಂಶೋಧನೆ ಕ್ಷೇತ್ರಗಳಲ್ಲಿ ನೀಡಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ರಾಷ್ಟ್ರೀಯ ಎಕ್ಸಲೆನ್ಸ ಕೌನ್ಸಿಲ್ ವತಿಯಿಂದ ನೀಡಲಾಗುವ “2026ರ ಕರ್ನಾಟಕ ಎಕ್ಸಲೆನ್ಸ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಪ್ರಶಸ್ತಿ ಡಾ. ಪ್ರಕಾಶ ಕೊಡ್ಲಿ ಅವರ ನಿಸ್ವಾರ್ಥ ಸೇವೆ, ಪರಿಶ್ರಮ ಮತ್ತು ಸಮಾಜಮುಖಿ ಮನೋಭಾವಕ್ಕೆ ಸಿಕ್ಕ ಮಾನ್ಯತೆಯಾಗಿದೆ.

WhatsApp Group Join Now
Telegram Group Join Now
Share This Article
error: Content is protected !!