ನೇಸರಗಿ: ಇಂದಿನ ಪ್ರಸಕ್ತ ದಿನಗಳಲ್ಲಿ ಜನ ಸಮಾಜ ನಮಗೆ ಏನು ಕೊಟ್ಟಿದೆ ಎಂದು ಕೇಳುತಿದ್ದಾರೆ, ಅದನ್ನು ಸಮಾಜದ ಜನರಾದ ನಾವು ವೆಲ್ಲರೂ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎನ್ನುವ ಕುರಿತು ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಬೆಳಗಾವಿ – ನಾಗನೂರ ಶ್ರೀ ರುದ್ರಾಕ್ಷಿಮಠದ ಪರಮಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರದಂದು ಬೆಳ್ಳಿಗೆ ೮-೩೦ ಕ್ಕೆ ನೇಸರಗಿ ಕ್ರಾಸ್ ಹತ್ತಿರ ಇರುವ ಬಸವೇಶ್ವರ ಸರ್ಕಲ್ ಹತ್ತಿರ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಅಲ್ಲಿಂದ ವಿದ್ಯಾ ಮಂದಿರ ಪ್ರೌಢ ಶಾಲೆಯಿಂದ ಶ್ರಾವಣ ಮಾಸದ ಪ್ರಯುಕ್ತ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಬಸವ ನಡಿಗೆ ಪಾದಯಾತ್ರೆ ನೆರವೇರಿಸಿ ಶ್ರೀ ವೀರಭದ್ರೇಶ್ವರ ದರ್ಶನ ಪಡೆದು ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಶೀರ್ವಚನ ಡಿ ಪವಿತ್ರ ಶ್ರಾವಣ ಮಾಸದಲ್ಲಿ ತಮ್ಮ ಗ್ರಾಮಕ್ಕೆ ಆಗಮಿಸಿ ಅಣ್ಣ ಬಸವಣ್ಣನವರ ವಚನ ಸಾಹಿತ್ಯ, ಸಮಾನತೆ ಮೌಲ್ಯವನ್ನು ಜಗತ್ತಿಗೆ ಸಾರಿ, ಕಳೆದ ೯೦೦ ವರ್ಷಗಳ ಹಿಂದೆ ದಯವಿಲ್ಲದ ಧರ್ಮ ಯಾವುದಯ್ಯ, ದಯವೇ ಧರ್ಮದ ಮೂಲವಯ್ಯ!, ಕಳಬೇಡ ಕೊಲಬೇಡ, ಹುಸಿಯ ನುಡಿಯಬೇಡ ಎಂಬ ಆದರ್ಶ ತತ್ವವನ್ನು ಜಗತ್ತಿಗೆ ಸಾರಿದವರು ಬಸವಣ್ಣನವರು,ಜಾತಿಗಳಲ್ಲಿ ಕೆಲವರು ಗಂಡು ಮತ್ತು ಹೆಣ್ಣು ಎಂದರು. ಆದರೆ ಅಣ್ಣ ಬಸವಣ್ಣನವರು ಮಾತ್ರ ಭವಿ ಮತ್ತು ಭಕ್ತಿ ಎಂಬ ಹೆಸರಿಟ್ಟು, ದೇವರನ್ನು ನಂಬುವವರು ಹಾಗೂ ದೇವರನ್ನು ನಂಬದವರು ಎಂದು ವಿಮೋಚನೇ ಮಾಡಿ ಜಾಗತಿಕ ಮಟ್ಟದಲ್ಲಿ ಸಂಸ್ಕೃತಿ,ಶ್ರೇಷ್ಠ ಪರಂಪರೆ ಸಾಹಿತ್ಯ ಸಾರಿ ಸಂಸ್ಕೃತಿ ಹಾಗೂ ಸಂಸ್ಕಾರ ಹಾಕಿಕೊಟ್ಟು ಜಗತ್ತಿನ ವಿಶ್ವಗುರು ಬಸವಣ್ಣನವರು , ಅವರಂತೆ ಅವರ ಅಳಿಯ ಶ್ರೀ ಚನ್ನಬಸವೇಶ್ವರರು ಉಳವಿಗೆ ಹೋಗಿ ಧರ್ಮ ಪ್ರಚಾರ ಮಾಡಿ ಹೆಸರುವಾಸಿಯಾದರು.೧೯೩೨ ರಲ್ಲಿ ಕೆ ಎಲ್ ಇ ಸಂಸ್ಥೆ ಜನರಿಗೆ ಉತ್ತಮ ಶಿಕ್ಷಣ ಡುತಿತ್ತು ಆದರೆ ಓದುವ ವಿದ್ಯಾರ್ಥಿಗಳಿಗೆ ವಸತಿ, ದಾಸೋಹ ವ್ಯವಸ್ಥೆ ಇರಲಿಲ್ಲ, ಇದನ್ನು ಮನಗಂಡ ಶ್ರೀ ರುದ್ರಾಕ್ಷಿಮಠದ ಲಿಂ. ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳು ಬೆಳಗಾವಿಯ ರುದ್ರಾಕ್ಷಿಮಠದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಮತ್ತು ದಾಸೋಹ ವ್ಯವಸ್ಥೆ ಕಲ್ಪಿಸಿ ಮಹಾನ್ ಪುರುಷರಾದರು.ಅದಕ್ಕಾಗಿ ಶ್ರೀ ರುದ್ರಾಕ್ಷಿಮಠ ರಂತರವಾಗಿ ಬೆಳೆದು ಬಂದು ಶಿಕ್ಷಣ, ಧಾರ್ಮಿಕ, ದಾಸೋಹ, ಸಂಸ್ಕೃತಿ,ಕನ್ನಡ ಸಾಹಿತ್ಯ, ಬಸವ ಸಾಹಿತ್ಯದ ಬಗ್ಗೆ ರಂತರ ಕೆಲಸ ಮಾಡುತ್ತಿದೆ ಎಂದು ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ಕೆ ಪಿ ಸಿ ಸಿ ಸದಸ್ಯರು, ಲಿಂಗಾಯತ ಸಂಘಟನೆ ಪದಾಧಿಕಾರಿಗಳಾದ ಶ್ರೀಮತಿ ರೋಹಿಣಿ ಪಾಟೀಲ ಮಾತನಾಡಿ ರುದ್ರಾಕ್ಷಿಮಠದ ಲಿಂ. ಡಾ. ಶಿವಬಸವ ಶ್ರೀ ಗಳು, ಶ್ರೀ ಸಿದ್ದರಾಮ ಶ್ರೀಗಳು, ಮತ್ತು ಪರಮಪೂಜ್ಯ ಡಾ. ಅಲ್ಲಮಪ್ರಭು ಶ್ರೀಗಳು ಸತತವಾಗಿ ಬಡ ಜನರ, ಶೈಕ್ಷಣಿಕ, ಉನ್ನತ ಶಿಕ್ಷಣ, ನಾನು ನುಡಿ, ಸಾಹಿತ್ಯ, ಸಂಗೀತ, ಧರ್ಮ ದಾಸೋಹ ಕಾರ್ಯದಲ್ಲಿ ರಂತರವಾಗಿ ಕೆಲಸ ಮಾಡುತ್ತಿದ್ದು ಪೂಜ್ಯ ಗುರುಗಳು ನೇಸರಗಿ ಗ್ರಾಮಕ್ಕೆ ಶ್ರಾವಣ ಮಾಸದಲ್ಲಿ ಆಗಮಿಸಿ ಗ್ರಾಮಕ್ಕೆ ಶೋಭೆ ತಂದಿದ್ದು, ಅವರಿಗೆ ನಾವು ವೆಲ್ಲರೂ ಕೃತಜ್ಞರಾಗೋಣ ಎಂದರು. ನನ್ನ ಕಾರ್ಯ ಗಮಸಿ ಶ್ರೀ ಮಠ ನನಗೆ ಮಹಿಳಾ ರತ್ನ ಡಿ ಸನ್ಮಾಸಿತು, ಆಗಿಂದರೆ ನನಗೆ ಅನೇಕ ಸಂಘ ಸಂಸ್ಥೆ, ಮಹಿಳೆಯರು ಸನ್ಮಾಸಿದರು. ಆಗ ನಾನು ಹೆಚ್ಚಿನ ನಾಡಿನ ಜನರಿಗೆ ಪರಿಚಿತನಾದೆ, ಅದೇ ನನಗೆ ಪ್ರೇರಣೆ ಮತ್ತು ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಇಂದು ಇರತ್ತೆ ನಾಳೆ ಹೋಗತ್ತೆ, ಭಾಷಣ ಮಾಡಿ ಹೋದರೆ ದೊಡ್ಡ ಮನುಷ್ಯ ಆಗುವದಿಲ್ಲ, ಸಮಾಜದ ಕೆಲಸವನ್ನು ಕಾರ್ಯರೂಪಕ್ಕೆ ತರಬೇಕು, ಇಲ್ಲಿ ನಾನು ಶಾಸಕರ ಪತ್ನಿಯಾಗಿ ಬಂದಿಲ್ಲ, ಲಿಂಗಾಯತ ಸಮಾಜದ ಹೆಣ್ಣು ಮಗಳಾಗಿ ಬಂದಿದ್ದೇನೆ. ಗ್ರಾಮದ ಬಸವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸದಾ ಸಹಕಾರ ಡುತ್ತೇನೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ಮಾತನಾಡಿ ಸಮಾಜದ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಜಾತಿ, ಧರ್ಮ, ಅಸ್ತಿತ್ವ, ಆಶೆ ಬಿಟ್ಟು ನಾವು ವೆಲ್ಲರೂ ಸ್ವಪ್ರೇರಣೆಯಿಂದ ಕೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಆದಷ್ಟು ಬೇಗ ನೇಸರಗಿ ಕ್ರಾಸ್ ನಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರರ ಮೂರ್ತಿ ಪುತ್ತಳಿ ರ್ಮಾಣ ಆಗಬೇಕು ಅದಕ್ಕೆ ಎಲ್ಲ ರೀತಿಯ ಸಹಕಾರ ಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ರಾಜಶೇಖರ ಯತ್ತಿನಮ, ಮಲ್ಲಿಕಾರ್ಜುನ ಸೋಮಣ್ಣವರ, ಸಚಿನ ಪಾಟೀಲ, ಹಿರಿಯ ಪತ್ರಕರ್ತರು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ಮುರಗೇಶ ಶಿವಪೂಜಿ, ಪ್ರೇಮಕ್ಕ ಅಂಗಡಿ, ಅಶೋಕ ಮಳಗಲಿ, ಮುರಿಗೆಪ್ಪ ಬಾಳಿ, ಕಾವೇರಿ ಕಿಲಾರಿ, ಶೋಭಾ ಶಿವಳ್ಳಿ, ಬಸನಗೌಡ ಚಿಕ್ಕನಗೌಡ್ರ, ವೀರಪ್ಪಣ್ಣ ಚೋಭಾರಿ, ಮಲ್ಲೇಶಪ್ಪ ಮಾಳಣ್ಣವರ,ಸೋಮಪ್ಪ ಸೋಮಣ್ಣವರ, ಬಾಳಪ್ಪ ಮಾಳಗಿ, ಬರಮಣ್ಣ ಸತ್ತೇನ್ನವರ, ಸೋಮನಗೌಡ ಪಾಟೀಲ, ಗುರು ತುಬಚಿ,ಅಶೋಕ ಅಗಸಿಮ,ಶಿವಂಗಪ್ಪ ಮಾಳಣ್ಣವರ, ಈರಪ್ಪ ಸೋಮಣ್ಣವರ,ಶಂಕರ ತಿಗಡಿ, ಗಂಗಪ್ಪ ಕಾಡಣ್ಣವರ, ಸಿದ್ದಪ್ಪ ಇಂಚಲ, ಮಲ್ಲಿಕಾರ್ಜುನ ಹಸಬಿ, ಸುರೇಶ ನವಲಗಟ್ಟಿ, ಸುರೇಶ ಅಗಸಿಮ, ಬಸವರಾಜ ಚಿಕ್ಕನಗೌಡ್ರ, ಮಹಾಬಳೇಶ್ವರ ಕಟ್ಟಿಮ, ಮಲ್ಲಿಕಾರ್ಜುನ ಸೋಮಣ್ಣವರ,ಸುರೇಶ ಖಂಡ್ರಿ, ಗುರುಪಾದಯ್ಯ ಚರಂತಿಮಠ, ಸಿದ್ದಯ್ಯ ಚರಂತಿ ಮಠ, ಗೀತಾ ಖಂಡ್ರಿ, ವಿನಾಯಕ ಮಾಸ್ತಮರಡಿ, ಮಡಿವಾಳಯ್ಯ ಚರಂತಿಮಠ, ಚನಗೌಡ ಪಾಟೀಲ ಉಪಸ್ಥಿತರಿದ್ದರು.
ಫಕ್ಕಿರಪ್ಪಾ ಸೋಮಣ್ಣವರ ಸ್ವಾಗತಿಸಿ ಪರಿಚಯ ಮಾಡಿದರೆ, ಅಬ್ಬಾಯಿ ಗುರುಗಳು ನಿ
ರೂಪಣೆ ಮಾಡಿದರು.
ಸಮಾಜ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎನ್ನುವದನ್ನು ಅರಿಯಿರಿ :ಡಾ. ಅಲ್ಲಮಪ್ರಭು ಶ್ರೀಗಳು

WhatsApp Group
Join Now


