ಗಣೇಬೈಲ್ ಟೋಲ್ ಸಿಬ್ಬಂದಿ ಹಾಗೂ ಯುವ ರಕ್ಷಣಾ ವೇದಿಕೆ ಹೋರಾಟಕ್ಕೆ ಜಯ ಕಾರ್ಮಿಕರ ಬಾಕಿ ವೇತನ ಪಾವತಿಸುವಂತೆ ಆದೇಶ

Prasanna Kumbar
WhatsApp Group Join Now

ಗಡಿಕನ್ನಡಿಗ

ಖಾನಾಪುರ: ಬೆಳಗಾವಿ-ರಾಮನಗರ ಹೆದ್ದಾರಿಯ ಖಾನಾಪುರದ ಗಣೆಬೈಲ್ ಹತ್ತಿರದ ಶುಲ್ಕ ವಸೂಲಾತಿ ಕೇಂದ್ರದಲ್ಲಿ ಕಾರ್ಮಿಕರಿಗೆ ಸಿಗಬೇಕಾದ ವೇತನ ಸೇರಿದಂತೆ ಸೌಲಭ್ಯಗಳನ್ನ ಒದಗಿಸುವಂತೆ ಆಗ್ರಹಿಸಿ ಟೋಲ್ ಸಿಬ್ಬಂದಿ ಹಾಗೂ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಟೋಲ್ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು.

ಟೋಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕರ್ನಾಟಕ ಕಾರ್ಮಿಕ ಕಾಯಿದೆ 1970 ರ ಗುತ್ತಿಗೆ ಕಾರ್ಮಿಕ
ಅನುಸಾರ ವೇತನ ಹಾಗೂ ಟೋಲ್ ಗುತ್ತಿಗೆದಾರ ಈಗಾಗಲೇ ಬಾಕಿ ಉಳಿಸಿಕೊಂಡಿರುವ ವೇತನ, ವಿಶ್ರಾಂತಿ ಕೊಠಡಿ, ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳನ್ನ ಸರಿಪಡಿಸುವಂತೆ ಮನವಿಯಲ್ಲಿ ತಿಳಿಸಲಾಗಿತ್ತು ಜೊತೆಗೆ ಸಮಸ್ಯೆಗಳನ್ನ ಪರಿಹರಿಸಲು ಗಡವೂ ನೀಡಲಾಗಿತ್ತು.

ಈಗ ಮನವಿಗೆ ಸ್ಪಂದಿಸಿದ ಧಾರವಾಡದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎ ಎಲ್ ಸಿ ಹಾಗೂ NHAIನ ವ್ಯೌಸ್ಥಾಪಕ ಅಜಿಂಖ್ಯ ನವಲೆ ಗುತ್ತಿಗೆದಾರ ಋಷಿರಾಜ್ ಸಿಂಗ್ ಅವರ ಆಡಳಿತ ಮಂಡಳಿಯ ಸಭೆಗೆ ಕರೆದಿದ್ದರು ಆದರೆ ಸಭೆಗೆ ಹಾಜರಾಗದ ಆಡಳಿತ ಮಂಡಳಿ ವಿರುದ್ದ ಗಂಭಿರ ತೀರ್ಮಾಣ ತೆಗೆದುಕೊಂಡು ಬಾಕಿ ಇರುವ ವೇತನ ಮತ್ತು ಬೋನಸ್ ಅನ್ನು ಕಾರ್ಮಿಕರಿಗೆ ವಿತರಿಸಲು ಆಡಳಿತ ಮಂಡಳಿಗೆ ಸಲಹೆ ನೀಡಿದ್ದು.

.
ಅದರಂತೆ, ಸಮನ್ವಯ ಅಧಿಕಾರಿಯು ಪ್ರಧಾನ ಉದ್ಯೋಗದಾತರಿಗೆ ಕೆಲಸಗಾರರು ಎತ್ತಿರುವ ಕುಂದುಕೊರತೆಗಳು ಮತ್ತು ವಿವಾದಗಳನ್ನು ಪರಿಶೀಲಿಸಲು, ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸಂಬಂಧಿತ ದಾಖಲೆಗಳು/ದಾಖಲೆಗಳನ್ನು 16.02.2026 ರಂದು ಅಥವಾ ಅದಕ್ಕೂ ಮೊದಲು ಈ ಕಚೇರಿಗೆ ಸಲ್ಲಿಸಲು ಸಲಹೆ ನೀಡಿದ್ದಾರೆ

ಅಲ್ಲದೇ ಇನ್ನು ಮುಂದೆ ಗುತ್ತಿಗೆದಾರ ಕಡಿಮೆ ವೇತನ ಅಥವಾ ಅಧಿಸೂಚಿತ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಾವತಿ ಮಾಡಿದ ಸಂದರ್ಭದಲ್ಲಿ ಸಮಾಧಾನ್ ಪೋರ್ಟಲ್ ಮೂಲಕ ತಮ್ಮ ಹಕ್ಕುಗಳನ್ನು ಸಲ್ಲಿಸಬಹುದು ಎಂದು ಕಾರ್ಮಿಕರಿಗೆ ತಿಳಿಹೇಳಿದ್ದು ಅಧಿಕಾರಿಗಳ ತೀರ್ಮಾಣಕ್ಕೆ ಯುವ ರಕ್ಷಣಾ ಪಡೆ ತಾಲ್ಲೂಕು ಅಧ್ಯಕ್ಷ ಪಾಂಡುರಂಗ ಗೂಳನ್ನವರ ಹಾಗೂ ಸದಸ್ಯರು, ಸಿಬ್ಬಂದಿಗಳು ಸ್ವಾಗತಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!