ಗಡಿ ಕನ್ನಡಿಗ ಇಂಪ್ಯಾಕ್ಟ್

ಖಾನಾಪುರ: ಶುಕ್ರವಾರ ಬೆಳಗ್ಗೆ ಗಡಿಕನ್ನಡಿಗ ಸುದ್ದಿಯಲ್ಲಿ ಬೀಡಿಯ ಪ್ರಾಥಮಿಕ ಆರೋಗ್ಯ ಸಿಬ್ಬಂದಿಯ ಕುರಿತು ‘ಮಾನವೀಯತೆ ಮರೆತ ಸರಕಾರಿ ಆಸ್ಪತ್ರೆ ಸಿಬ್ಬಂದಿ’ ಶೀರ್ಷಿಕೆಯಡಿಯಲ್ಲಿ ವಿವರವಾದ ಸುದ್ದಿ ಬಿತ್ತರಿಸಿತ್ತು
ಈ ಗಮನಿಸಿದ ತಾಲೂಕಾ ವೈದ್ಯಾಧಿಕಾರಿ ಮಹೇಶ ಕಿವಡಸನ್ನವರ ಘಟನೆಯನ್ನ ಗಂಭಿರವಾಗಿ ಪರಿಗಣಿಸಿ ಸುದ್ದಿ ಬಿತ್ತರಿಸಿದ ಎಂಟು ಘಂಟೆಯೊಳಗೆ ಅಲ್ಲಿನ ಸಿಬ್ಬಂದಿ ಆಶಾ ಐಹೊಳೆ ಎಂಬುವವರನ್ನ ಆ ಸ್ಥಳದಿಂದ ಬೇರೆಡೆ ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಿದ್ದು ಗಡಿ ಕನ್ನಡಿಗ ಸುದ್ದಿಗೆ ಫಲಶೃತಿ ಸಿಕ್ಕಂತಾಗಿದೆ.


