ಮಹಾಸ್ವಾಮಿಗಳ  ವಿಶೇಷ ಪೂಜೆ ನೆರವೇರಿಸಿ ಪುನಿತರಾದ ಭಕ್ತಸಮೂಹ

Murugesh Shivapuji
ಮಹಾಸ್ವಾಮಿಗಳ  ವಿಶೇಷ ಪೂಜೆ ನೆರವೇರಿಸಿ ಪುನಿತರಾದ ಭಕ್ತಸಮೂಹ
WhatsApp Group Join Now

(ಗಡಿ ಕನ್ನಡಿಗ ವರದಿ ಬೆಳಗಾವಿ)

ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀ ಗುರುರಾಘವೇಂದ್ರ ಮಹಾಸ್ವಾಮಿಗಳ ಮಧ್ಯಾರಾಧನೆ ನಿಮಿತ್ತ ಶತಮಾನಗಳ ಇತಿಹಾಸವಿರುವ ಸಂಪಗಾಂವ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಭಾನುವಾರ ಶ್ರೀರಾಯರಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಮಠದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಸೇರಿದಂತೆ ಪೂಜಾಕೈಂಕರ್ಯಗಳು ಅದ್ಧೂರಿಯಾಗಿ ಜರುಗಿದವು. ರಾಘವೇಂದ್ರ ಸ್ವಾಮಿಗಳ ಮೂಲವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಆರಾಧನಾ ಮಹೋತ್ಸವದ ಅರ್ಚಕರಾದ ಹನಮಂತ ಆಚಾರ್ಯ ಬೆಂಡಿಗೇರಿ ಹಾಗೂ ಮಂಜುನಾಥ ಕಟ್ಟಿಯವರ ನೇತೃತ್ವದಲ್ಲಿ ಅರ್ಚಕರಾದ ಗುರುರಾಜ ಪಾಗಾದ ಹಾಗೂ ಗುರುರಾಜ ಕಿತ್ತೂರವರ ಸಹಾಯಕತ್ವದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಸೇವೆಗಳು ಭಕ್ತಿ ಭಾವದಿಂದ ಸಮರ್ಪಿಸಲಾಯಿತು. ಪಾಲಕಿ ಸೇವೆ ಸೇರಿದಂತೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಪಗಾಂವ ಸೇರಿದಂತೆ ಬೆಳಗಾವಿ ನಗರದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ರಾಯರ ದರ್ಶನ ಪಡೆದು ವಿಶೇಷ ಪೂಜೆಗಳನ್ನು ನೆರವೇರಿಸಿ ಪುನೀತರಾದರು.

ದೇವಸ್ಥಾನದಲ್ಲಿ ಭಜನೆ, ಪಾರಾಯಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಭಕ್ತರಲ್ಲಿ ಧಾರ್ಮಿಕ ಭಾವನೆ ಹಾಗೂ ಆಧ್ಯಾತ್ಮಿಕ ಚಿಂತನೆ ಮೂಡಿಸುವುದರ ಜತೆಗೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸದ್ಭಾವನೆ ಬೆಳೆಸುವ ಸಂದೇಶ ಸಾರಿತು. ಮಠದ ಆಡಳಿತ ಮಂಡಳಿ, ಅರ್ಚಕರು ಹಾಗೂ ಭಕ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಇದೇ ಸಂದರ್ಭದಲ್ಲಿ ವಿಪ್ರ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಸೇರಿದಂತೆ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸತ್ಕರಿಸಲಾಯಿತು.

ಇಂದು ರಥೋತ್ಸವ: ಶ್ರೀರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವದ ಕೊನೆಯ ದಿನವಾದ ಉತ್ತರಾಧನೆಯು ಆ.31ರಂದು ರಾಯರಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ರಾಯರ ರಥೋತ್ಸವ ಜರುಗಲಿದೆ.

ಶ್ರೀಮಠದ ಕಟ್ಟಡ ನವೀಕರಣಕ್ಕಾಗಿ ಧನ ಸಹಾಯಕ್ಕೆ ಶ್ರೀಮಠದ ಟ್ರಸ್ಟ್‌ ಮನವಿ

ಶತಮಾನ ಇತಿಹಾಸವಿರುವ ಸಂಪಗಾಂವ ರಾಘವೇಂದ್ರ ಸ್ವಾಮಿಗಳ ಮಠದ ಕಟ್ಟಡದ ನವೀಕರಣ ಹಾಗೂ ಪುನರ್‌ ನಿರ್ಮಾಣ ಮಾಡಲು ಶ್ರೀಮಠದ ಕಟ್ಟಡ ನಿರ್ಮಾಣ ಕಾರ್ಯ ಆಡಳಿತ ಮಂಡಳಿ ನಿರ್ಧರಿಸಿದ್ದಾರೆ. ಕಟ್ಟಡ ನಿರ್ಮಾಣದ ನೀಲಿನಕ್ಷೆಯನ್ನು ಸಿದ್ಧಗೊಳಿಸಿದ್ದು, ಸುಮಾರು ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ವ್ಯಯವಾಗಲಿದೆ. ಹೀಗಾಗಿ ಶ್ರೀಮಠದ ಭಕ್ತರು ಕಟ್ಟಡ ನಿರ್ಮಾಣಕ್ಕೆ ತನು, ಮನ, ಧನ ಸಹಾಯ ಮಾಡುವ ಮೂಲಕ ಶ್ರೀಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಶ್ರೀರಾಘವೇಂದ್ರ ಸ್ವಾಮಿಗಳ ಕೃಪಾರ್ಶೀವಾದಕ್ಕೆ ಪಾತ್ರರಾಗಬೇಕು ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ದಾಮೋಧರ ಕೆ.ಜೋಷಿ, ಉಪಾಧ್ಯಕ್ಷ ರಾಮಚಂದ್ರ ವಿ.ಕಿತ್ತೂರ, ಕಾರ್ಯದರ್ಶಿ ವಿರೂಪಾಕ್ಷ ಆರ್‌.ತಿಗಡಿಕರ, ಕೋಶಾಧ್ಯಕ್ಷ ರವೀಂದ್ರ ವಿ.ಕುಲಕರ್ಣಿ, ಕಾನೂನು ಸಲಹೆಗಾರ ಸಂಜೀವ ವಿ.ಕುಲಕರ್ಣಿ, ಆರ್ಥಿಕ ಸಲಹೆಗಾರ ರಮೇಶ ವಿ.ಕುಲಕರ್ಣಿ, ತಾಂತ್ರಿಕ ಸಲಹೆಗಾರ ವಿಶ್ವಂಭರ ಎಂ.ಕುಲಕರ್ಣಿ, ಸದಸ್ಯರಾದ ನಿತಿನ ವಿ.ಕುಲಕರ್ಣಿ, ಅಚ್ಯುತ್‌ ಪಿ.ಕುಲಕರ್ಣಿ, ರಾಜೇಶ ಜಿ.ಜೋಶಿ, ಪ್ರಸನ್ನ ವಿ.ಕುಲಕರ್ಣಿ, ಪ್ರಶಾಂತ ಪಿ.ಕುಲಕರ್ಣಿ, ಸುಭಾಷ ಆರ್‌.ತಿಗಡಿಕರ, ವೆಂಕಟೇಶ ಎನ್‌.ಕುಲಕರ್ಣಿ, ಲೀಲಾವತಿ ಶಂಕರರಾವ ಕುಲಕರ್ಣಿ ಸೇರಿದಂತೆ ಸಂಪಗಾಂವನ ಶ್ರೀ ರಾಘವೇಂದ್ರ ಸ್ವಾಮಿಗಳ ಸೇವಾ ಟ್ರಸ್ಟ್‌ ಕೋರಿದೆ.

ಧನ ಸಹಾಯ ಮಾಡಲು ಇಚ್ಚಿಸುವವರು ಶ್ರೀ ರಾಘವೇಂದ್ರ ಸ್ವಾಮಿಗಳ ಸೇವಾ ಟ್ರಸ್ಟ್‌, ಸಂಪಗಾಂವ ಕೆನರಾ ಬ್ಯಾಂಕ್‌ ಅಕೌಂಟ್‌ ನಂಬರ್‌: 120034931005, ಐಎಫ್‌ಎಸ್‌ಸಿ ಕೋಡ್: ಸಿಎನ್‌ಆರ್‌ಬಿ0010519. ಹೆಚ್ಚಿನ ಮಾಹಿತಿಗಾಗಿ ಮೊ.9482058828, 9739411083 ಸಂಪರ್ಕಿಸಬಹುದು.

WhatsApp Group Join Now
Telegram Group Join Now
Share This Article
error: Content is protected !!