(ಗಡಿ ಕನ್ನಡಿಗ ವರದಿ ಕಲಬುರಗಿ)
ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರರಾಗಿ (ಪ್ರಭಾರ) ಕಾರ್ಯನಿರ್ವಹಿಸುತ್ತಿದ್ದ ಶ್ರೀಧರ ಸಾರವಾಡರು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಆ.31ರಂದು ಕಲಬುರ್ಗಿಯ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಸಭಾಂಗಣದಲ್ಲಿ ಆ.31ರಂದು ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಪಿಡಬ್ಲ್ಯೂಡಿ ಸಂಪರ್ಕ ಮತ್ತು ಕಟ್ಟಡಗಳ ವಿಭಾಗದ ಮುಖ್ಯ ಎಂಜಿನಿಯರ್ ಸುಭಾಷ. ಎಲ್ ಶಿಕ್ಷಣಕರ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಡಬ್ಲ್ಯೂಡಿ ಗುಣ ಭರವಸೆ ವಲಯದ ಪ್ರಧಾನ ಇಂಜಿನಿಯರ್ ಎಚ್.ಕೆ.ದಿವಾಕರ ನಾಯಕ, ಪಿಡಬ್ಲ್ಯೂಡಿ ಕಲಬುರ್ಗಿ ಅಧೀಕ್ಷಕ ಇಂಜಿನಿಯರ್ ಅಮೀನ್ ಮುಕ್ತಾರ್ ಅಹ್ಮದ್, ಬಳ್ಳಾರಿ ಕಾರ್ಯನಿರ್ವಾಹಣ ಎಂಜಿನಿಯರ್ ಗುಣ ಭರವಸೆ ವಿಭಾಗದ ಪಿ.ಎಂ.ರಾಮಾಂಜನೇಯುಲು, ಪಿಡಬ್ಲ್ಯೂಡಿ ಇಇ ರಾಹುಲ್ ಕಾಂಬಳೆ, ರಾಷ್ಟ್ರೀಯ ಹೆದ್ದಾರಿ ಇಇ ಮಹ್ಮದ್ ಇಬ್ರಾಹಿಂ, ಕೆಆರ್.ಡಿಸಿಎಲ್ ಇಇ ಬಸವರಾಜ ಆಗಮಿಸುವರು. ಪಿಡಬ್ಲ್ಯೂಡಿ ಗುಣ ಭರವಸೆ ವಿಭಾಗದ ಎಇಇ ಖುರ್ಷಿದ್ ಬಾನು ಅಧ್ಯಕ್ಷತೆ ವಹಿಸಲಿದ್ದಾರೆ.



