State

ರಾಷ್ಟ್ರೀಯ ಸೇವಾ ಯೋಜನೆ ; ಎಸ್. ಜಿ. ಬಾಳೇಕುಂದ್ರಿ ಕಾಲೇಜಿನಿಂದ ವಾರ್ಷಿಕ ವಿಶೇಷ ಶಿಬಿರ-೨೦೨೩  

WhatsApp Group Join Now
Telegram Group Join Now

ಬೆಳಗಾವಿ: ಸಮಾಜದಲ್ಲಿ, ಅದರಲ್ಲೂ ಹಳ್ಳಿಗಳಲ್ಲಿನ ಜನರಲ್ಲಿ ಪ್ರಪಂಚದಲ್ಲಿ ಎಲ್ಲ ರಂಗಗಳಲ್ಲೂ ನಡೆಯುತ್ತಿರುವ ವಿಶೇಷ ಆಧುನಿಕತೆ ಮತ್ತು ಈಗಿನ ಸದ್ಯದ ತಂತ್ರಜ್ಞಾನ, ಹೊಸ ಆವಿಷ್ಕಾರ, ವೈಜ್ಞಾನಿಕ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಹಾಗು ಅಂತರ್ಯಾಮಿ ಫೌಂಡೇಶನ್ ಬೆಳಗಾವಿಯ ಸಹಭಾಗಿತ್ವದಲ್ಲಿ ಒಂದು ವಾರದ ವಾರ್ಷಿಕ ವಿಶೇಷ ಶಿಬಿರ ೨೦೨೩, ಅಧ್ಯಾಯ 02 ನ್ನು ಬೆಳಗಾವಿಯ ಇದ್ದಲಹೊಂಡ ಗ್ರಾಮ ಪಂಚಾಯತಿಯ ಇದ್ದಲಹೊಂಡ ಎಂಬ ಗ್ರಾಮದಲ್ಲಿ 16/11/2023 ರಿಂದ 22/11/2023  ರ ವರೆಗೆ ರೈತರ ದಿನ, ಸ್ವಚ್ಛ ಸುಂದರ ದಿನ, ಜಾಗೃತ ದಿನ,  ಆರೋಗ್ಯ ದಿನ,  ಮಕ್ಕಳ ದಿನ ಎಂಬ ವಿಶೇಷ ವಿಷಯಗಳ ಮೇಲೆ ಹಮ್ಮಿಕೊಳ್ಳಲಾಗಿದೆ.
ಈ  ಒಂದು ವಾರದ ವಾರ್ಷಿಕ ವಿಶೇಷ ಶಿಬಿರ ೨೦೨೩, ಅಧ್ಯಾಯ 02 ರ ಉದ್ಘಾಟನಾ ಸಮಾರಂಭವನ್ನು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನ ವಹಿಸಿದ್ದ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ. ಆರ್. ಪಟಗುಂದಿ ಅವರು ಮಾತನಾಡಿ ದೇಶವನ್ನ ಕಟ್ಟುವಲ್ಲಿ ಯುವಕರ ಪಾತ್ರ ಬಹುದೊಡ್ಡದು, ಅದರಲ್ಲಿಯೂ ಸ್ವಯಂ ಸೇವಕರ ಸೇವೆ ಗಣನೀಯವಾಡದದ್ದು ಎಂದು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗದಿಂದ ವಾರ್ಷಿಕ ವಿಶೇಷ ಶಿಬಿರವನ್ನ ಸತತ ೭ ದಿನಗಳ ಕಾಲ ಆಯೋಜನೆ ಮಾಡಿದಕ್ಕಾಗಿ ಮೆಚ್ಚುಗೆ ವ್ಯಕ್ತ ಪಡಿಸಿ ಸಂಯೋಜಕರಾದ ಪ್ರೊ. ಮಂಜುನಾಥ ಶರಣಪ್ಪನವರ ಮತ್ತು ಭಾಗವಹಿಸುವ ಎಲ್ಲ ವಿಭಾದಗದ ವಿದ್ಯಾರ್ಥಿಗಳಿಗೆ ಶುಭ ಕೋರಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇದ್ದಲಹೊಂಡ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀ ಚಾOಗಪ್ಪಾ ಬಾಚೋಳ್ಕರ್ ಅವರು ಮಾತನಾಡಿ ಸರ್ಕಾರ, ಇತರ ಜನಪ್ರತಿನಿಧಿಗಳು ಮಾಡಬೇಕಾದ ಜವಾಬ್ದಾರಿಯುತ ಕೆಲೆಸವನ್ನು ವಿದ್ಯಾರ್ಥಿಗಳು ಮಾಡಿ ಇದ್ದಲಹೊಂಡ ಗ್ರಾಮದಲ್ಲಿ ಪರಿವರ್ತನೆ ತರಲು ಅತ್ಯಂತ ಶ್ರದ್ಧೆಯಿಂದ ಸೇವೆಯನ್ನ ಸಲ್ಲಿಸಲು ಆಗಮಿಸಿದ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ, ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ವನ್ನು ಶ್ಲ್ಯಾಘಿಸಿ, ಯಶಸ್ವಿಯಾಗಿ ಒಂದು ವಾರದ ಶಿಬಿರವನ್ನು ಸಂಪೂರ್ಣಗೊಳಿಸಲು ಶುಭಾಶಯಗಳನ್ನ ಕೋರಿ ಹುರಿದುಂಬಿಸಿದರು.
ಇದೆ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಅಂತರ್ಯಾಮಿ ಫೌಂಡೇಷನ್ನಿನ ಅಧ್ಯಕ್ಷರಾದ ಶ್ರೀ. ನಾಗರಾಜ ಗಸ್ತಿ ಅವರು ಮಾತನಾಡಿ ನಮ್ಮ ಭಾರತ ದೇಶವನ್ನು ವಿಶ್ವಗುರುವನ್ನಾಗಿಸಲು ಈ ತರಹದ ಶಿಬಿರಗಳು ಬಹುಮುಖ್ಯ ಪಾತ್ರ ವಹಿಸುವುದು, ಯುವಕರು ಪ್ರಶಸ್ತಿ ಪತ್ರಕ್ಕಾಗಿ ಸಮಾಜ ಸೇವೆಯನ್ನ ಮಾಡುವ ಬದಲು ನಿಜವಾದ ಬದಲಾವಣೆಗಾಗಿ, ಮನಸ್ಸಿನ ನೆಮ್ಮದಿಗಾಗಿ ಕೆಲಸ ಮಾಡುವ ಉದ್ದೇಶ ಹೊಂದಿರಬೇಕೆಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇದ್ದಲಹೊಂಡ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀ ಚಾಗಪ್ಪ ಬಾಚೋಳ್ಕರ್, ಶ್ರೀ ವೆಂಕಟೇಶ್ ಪಾಟೀಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿಯೋಜಿತ ಪ್ರಾಚಾರ್ಯರಾದ ಶ್ರೀ ಎಮ್. ವಿ. ಪಾಟೀಲ ಮತ್ತು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಅಂತರ್ಯಾಮಿ ಫೌಂಡೇಷನ್ನಿನ ಅಧ್ಯಕ್ಷರಾದ ಶ್ರೀ. ನಾಗರಾಜ ಗಸ್ತಿ ಅವರನ್ನು ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗದ ಪರವಾಗಿ ಸನ್ಮಾನಿಸಲಾಯಿತು.
ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗದ ಮುಖ್ಯಸ್ಥರಾದ ಹಾಗೂ ಶಿಬಿರದ ಸಂಯೋಜಕರಾದ ಪ್ರೊ. ಮಂಜುನಾಥ ಶರಣಪ್ಪನವರ ಅವರು ಕಾರ್ಯಕ್ರಮವನ್ನು ಆಯೋಜಿಸಿ ವಂದನಾರ್ಪಣೆಯನ್ನ ಸಲ್ಲಿಸಿದರು. ಕುಮಾರ ಮೆಹಬುಬ್ ತಿಮ್ಮಾಪುರ ಕಾರ್ಯಕ್ರಮವನ್ನ ನಿರೂಪಿಸಿದರು.
WhatsApp Group Join Now
Telegram Group Join Now

Related Posts