State

ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮುರುಗೇಶ್ ಶಿವಪೂಜಿ ಉಪಾಧ್ಯಕ್ಷರಾಗಿ ವಿಷ್ಣು ದೇವಾಡಿಗಾ

WhatsApp Group Join Now
Telegram Group Join Now

ಬೆಳಗಾವಿ ; ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಸದರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಅಧ್ಯಕ್ಷರಾಗಿ ಮುರುಗೇಶ್ ಶಿವಪೂಜೆ (ಬೆಳಗಾವಿ) ಮತ್ತು ಉಪಾಧ್ಯಕ್ಷರಾಗಿ ವಿಷ್ಣು ದೇವಾಡಿಗ (ಭಟ್ಕಳ) ಅವಿರೋಧವಾಗಿ ಇಂದು ಆಯ್ಕೆಗೊಂಡಿದ್ದಾರೆಂದು ಚುನಾವಣಾ ಅಧಿಕಾರಿ ವಾರ್ತಾ ಇಲಾಖೆ ಉಪ ನಿರ್ದೇಶಕ ಶ್ರೀ ಗುರುನಾಥ ಕಡಬೂರ ಘೋಷಿಸಿದರು.

ಸಂಘದ ನೂತನ ನಿರ್ದೇಶಕರುಗಳಾದ ಶ್ರವಣ್ ಕುಮಾರ್ ಯಮನಪ್ಪ ಧರನಾಯಕ್, ಶ್ರೀಮತಿ ಕೀರ್ತನಕುಮಾರಿ ಕೆ, ಶ್ರೀ ಸಿದ್ದಲಿಂಗಯ್ಯ ಹಿರೇಮಠ್, ಶ್ರೀ ಈರಪ್ಪ ಬಸಪ್ಪ ಬುಡ್ದ್ಯಾಗೋಳ್ , ಶ್ರೀ.ಪೆದ್ರು ಫ್ರಾನ್ಸಿಸ್ ಲೋಬೋ ,ಶ್ರೀ. ಸಂಪತ್ ಕುಮಾರ್ ಕಲ್ಯಾಣರಾವ್ ಮುಚ್ಚಳಂಬಿ , ಶ್ರೀ. ಶಿವರಾಯಪ್ಪ ಜನಜೀವಾಳ ಏಳುಕೋಟಿ, ಶ್ರೀ ರಾಜಕುಮಾರ ಬುಡ್ಡಪ್ಪ ನಾಯಿಕ್, ಶ್ರೀ. ಅಕಾನಬಾಷಾ ಮಹಮ್ಮದ್ ಕರ್ನಾಚಿ, ರಾಜಶ್ರೀ ವಸಂತ ಹೊಸಮನಿ, ಶ್ರೀ. ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ , ಶ್ರೀ.ಸಲೀಂ ಬಾಬಾಸಾಹೇಬ್ ಧಾರವಾಡಕರ್, ಶ್ರೀ. ಅಪ್ಪಾಸಾಹೇಬ್ ಶ್ರೀಪತಿ ಕುರುಣೆ , ಶ್ರೀ. ಮಲ್ಲಿಕಾರ್ಜುನ ಫಕೀರಪ್ಪ ಹೆಗನಾಯಕ್, ಶ್ರೀಮತಿ ಪ್ರೇಮಾ ವೀರಭದ್ರಯ್ಯ ಸಾಲಿಮಠ ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಚಿಕ್ಕಮಠ, ನಾಗರತ್ನ ಗೋಕಾಕ್ ಮುಂತಾದವರು ಭಾಗವಹಿಸಿದ್ದರು.

WhatsApp Group Join Now
Telegram Group Join Now

Related Posts