State

ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಪವಾಡೆಪ್ಪ ಚೌಡ್ಕಿ ಆಯ್ಕೆ

WhatsApp Group Join Now
Telegram Group Join Now

ಕುಷ್ಟಗಿ:- ಪಟ್ಟಣದ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ(ಎಸ್.ಡಿ.ಎಂ.ಸಿ) ಅಧ್ಯಕ್ಷರಾಗಿ ಪವಾಡೆಪ್ಪ ಚೌಡ್ಕಿ ಇವರನ್ನು ಸರ್ವಾನುಮತದಿಂದ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ಪ್ರೇಮಾವತಿ ಬಸಾಪೂರ ಇವರನ್ನು ಸಹ ಚೀಟಿ ಎತ್ತುವ ಮೂಲಕ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಮಲ್ಲಪ್ಪ ಕಂಚಿ, ಗುರುರಾಜ ಆಗೋಲಿ,ಶರಣಪ್ಪ ಚೂರಿ,ರಾಮಣ್ಣ ಭೋವಿ,ಸುರೇಶ ಗೌದಿ,ದುರಗಪ್ಪ ಎಚ್. ಪೂಜಾರಿ,ಬಡೇಸಾಬ ಲಡ್ಡಿ,ಮೈಬುಸಾಬ ಬಂಗಾಳಿ,ಅನ್ನಪೂರ್ಣ ಭೋವಿ, ಅಂಬಿಕಾ ರಾಠೋಡ್,ಸುಮೈಯಾ ಕಲಕಬಂಡಿ,ಕೌಸರಜಹಾನ್ ಮುದಗಲ್ಲ್,ಭೀಮವ್ವ ಕಟ್ಟಿ,ಚನ್ನವ್ವ ಕೋರಿ, ಪೂರ್ಣಿಮಾ ಹೊಸೂರ ಈ ಎಲ್ಲಾ ಸದಸ್ಯರನ್ನು ಸಭೆಯಲ್ಲಿ ಇದ್ದ ಪಾಲಕರ ಸರ್ವಾನುಮತ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಯಿತು.

ನಂತರ ಎಸ್.ಡಿ.ಎಂ.ಸಿ. ರಚನೆಯ ಆಯ್ಕೆ ಸಮಿತಿ ಸಮನ್ವಯಾಧಿಕಾರಿ ಬಿ.ಆರ್.ಸಿ.ಕುಷ್ಟಗಿ ಜಗದೇಶಪ್ಪ ಎಂ. ಸಂಪನ್ಮೂಲ ವ್ಯಕ್ತಿಗಳು ಬಿ.ಆರ್.ಸಿ. ಡಾ.ಜೀವನಸಾಬ ಬಿನ್ನಾಳ, ಹಾಗೂ ಶಿಕ್ಷಣ ಸಂಯೋಜಕರಾದ ತಿಮ್ಮಣ್ಣ ಹಿರೇಹೊಳಿ, ಸಂಪನ್ಮೂಲ ವ್ಯಕ್ತಿಗಳಾದ ಮೈಬುಸಾಬ ಮೇಣೆದಾಳ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಸಿದ್ರಾಮಪ್ಪ ಅಮರಾವತಿ ಇವರು ಎಸ್.ಡಿ.ಎಂ.ಸಿ ರಚನೆಗೆ ಬೇಕಾದ ಒಂದನೆಯ ಮತ್ತು ಎರಡನೇ ಸಭೆಯ ಕೊರಂ ಸಭೆ ನಡೆಸಿ ಸರಕಾರದ ನಿಯಮಾವಳಿಯಂತೆ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರ ಸರ್ವಾನುಮತದ ಅಭಿಪ್ರಾಯ ಮೇರೆಗೆ ಒಂದರಿಂದ ಏಳನೆಯ ತರಗತಿಯ ಶಾಲಾ ಪಾಲಕರ ಸಭೆ ನಡೆಸಿ ನಿಯಮಾವಳಿಯಂತೆ ಎಸ್ ಡಿ ಎಮ್ ಸಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರನ್ನು ಆಯ್ಕೆ ಮಾಡಿ ಘೋಷಣೆ ಮಾಡಿದರು.

ತದನಂತರ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸರ್ವ ಸದಸ್ಯರ ಅಪ್ಪಿಗೆ ಮೇರಿಗೆ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಶಾಲಾ ಮೇಲುಸ್ತುವಾರಿ ಸಮಿತಿ ಸರ್ವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಪುರಸಭೆ ಸದಸ್ಯೆಯಾದ ಜೋತಿ ಚಲವಾದಿ, ಶಿಕ್ಷಕರಾದ ಸರಸ್ವತಮ್ಮ, ಪಾರ್ವತಿ, ಜಿ.ಡಿ.ಪಾಟೀಲ,ರತ್ನಾ ಹೂಗಾರ,ಚಂದ್ರಕಲಾ ಗೋಡಿ, ಆಂಜನೇಯ ಎಚ್,ವೀಣಾ ಸೋನ್ನದ್,ರೂಪಾ ಗುಡ್ಲಾನೂರ, ಸುನೀತಾ ಹಾವೇರಿ, ರಿಹಾನಬೇಗಂ ನಾಲಬಂದ್,ವಿಜಯಲಕ್ಷ್ಮಿ ದೊಡ್ಡಮನಿ,ಚಂದಪ್ಪ ಆರ್.ನಿಡಗುಂದಿ ಸೇರಿದಂತೆ ಶಾಲಾ ಮಕ್ಕಳ ಪಾಲಕರು ಉಪಸ್ಥಿತರಿದ್ದರು.

 

 

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ

WhatsApp Group Join Now
Telegram Group Join Now

Related Posts