World

ಕಸಾಪ ರಾಜಣ್ಣ ಅಂಗಡಿಯವರಿಗೆ ನುಡಿನಮನ

WhatsApp Group Join Now
Telegram Group Join Now

ನಿಧನ ವಾರ್ತೆ:-23-3-24

ಕೊಪ್ಪಳ:- ಆತ್ಮೀಯತೆ ಅಂದ್ರೆ ರಾಜಣ್ಣ, ರಾಜಣ್ಣ ಅಂದ್ರೆ ಆತ್ಮೀಯತೆ, ಸ್ನೇಹಶೀಲತೆವೇಂಬಗುಣ ಇಡೀ ಮಾನವ ಸಂಬಂಧಗಳಲ್ಲಿ ಬಹಳ ಅಪರೂಪ, ಆತ್ಮೀಯ ಸಂಬಂಧ ಸ್ನೇಹಶೀಲತೆ. ಯಾವುದೇ ಜಾತಿ, ಜಾತಕ, ವರ್ಗ, ಬಂಧುತ್ವಗಳಂತಹ ಹಿನ್ನೆಲೆಗಳನ್ನು ನೋಡದೆ ಕೇವಲ ಆತ್ಮಗಳ ನಡುವಿನ ನಿಕಟತೆಯ ಪ್ರತಿರೂಪದಂತಿರುತ್ತದೆ

ಇಂತಹ ಸಂಬಂಧಗಳನ್ನು ಬಿತ್ತರಿಸುವುದಕ್ಕಾಗಿಯೇ, ವಿಸ್ತರಿಸುವುದಕ್ಕಾಗಿಯೇ, ಉಳಿಸಿಕೊಳ್ಳುವುದಕ್ಕಾಗಿಯೇ ಸಮಾಜದಲ್ಲಿ ಕೆಲವರು ಉದಾಹರಣೆಯಂತಿರುತ್ತಾರೆ
ಅಂಥವರೊಂದಿಗಿನ ಆತ್ಮೀಯತೆ ಒಡನಾಟಗಳಿಂದಾಗಿ ನಮ್ಮ ಬದುಕಿನಲ್ಲಿ ಒಂದು ಸವಿನೆನಪಾಗಿ ಉಳಿಯುತ್ತಾರೆ ಅಂತಹುದೆ ಸವಿನೆನಪನ್ನು ಉಳಿಸಿ ನಮ್ಮನ್ನಗಲಿದ ಆತ್ಮೀಯ ಒಡನಾಡಿ ಎಂದರೆ ಶ್ರೀ ರಾಜಶೇಖರ್ ಅಂಗಡಿ.

*ಅದ್ಭುತ ಸಂಘಟಕ*
ರಾಜಣ್ಣ ಓದಿದ್ದು ಕಡಿಮೆ ಅನುಭವ ಜಾಸ್ತಿ, ಹಿಡಿದ ಕೆಲಸವನ್ನು ಸಾಧಿಸುವ ಹಠವಾದಿ, ವ್ಯವಹಾರಿಕ ಕುಶಲತೆಗಳಿದ್ದರೂ ಕೂಡ ಪರಿಷತ್ತು ಹಾಗೂ ಆತ್ಮೀಯ ಬಳಗಗಳ ಪ್ರಶ್ನೆ ಬಂದಾಗ ವ್ಯವಹಾರ ಕ್ಕಿಂತ ಹೆಚ್ಚು ಹೃದಯವಂತಿಕೆಗೆ ಮಹತ್ವ ನೀಡುತ್ತಿದ್ದ. ಸಾಹಿತಿಗಳೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕು ಎನ್ನುವ ಸಂಪ್ರದಾಯವನ್ನು ಬದಿಗೊತ್ತಿ ಒಬ್ಬ ಸಂಘಟಕ, ಒಬ್ಬ ಸಾಹಿತ್ಯ ಪ್ರೇಮಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಹಿರೆವಂಕುಲಕುಂಟ ಅಳವಂಡಿ, ಬನ್ನಿಕೊಪ್ಪ ಕಾರಟಗಿ ಗಂಗಾವತಿ ಸಾಹಿತ್ಯ ಸಮ್ಮೇಳನಗಳನ್ನು ಅದ್ದೂರಿಯಾಗಿ ಸಂಘಟಿಸಿ ಯಶಸ್ವಿಯಾಗಿರೋದು ರಾಜಣ್ಣನ ವಿಶೇಷತೆಯಾಗಿತ್ತು
ಸಮ್ಮೇಳನಗಳ ಪೂರ್ವಸಿದ್ಧತೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಪಡೆಯುತ್ತಿದ್ದ ರಾಜಣ್ಣ ಕೊನೆಗೆ ತನ್ನ ನಿರ್ಣಯದಂತೆ ಸಮ್ಮೇಳನಗಳನ್ನು ಅದ್ದೂರಿಯಾಗಿ ಸಂಘಟಿಸುತ್ತಿದ್ದ, . ಗೋಷ್ಠಿಗಳಅಯ್ಕೆ, ವಿಷಯಗಳ ಆಯ್ಕೆ, ಉಪನ್ಯಾಸಕರ ಆಯ್ಕೆ, ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯ ಸಂದರ್ಭದಲ್ಲಿ ಸಮಿತಿಯ ಸದಸ್ಯರಿಗೆ ಪೂರ್ಣ ಸ್ವಾತಂತ್ರ್ಯ ನೀಡಿ ಹೊಸ ಹೊಸ ಗೋಷ್ಠಿಗಳು ಸಮ್ಮೇಳನ ಗಳಲ್ಲಿ ಆಯೋಜನೆವಾಗುವಂತೆ ವ್ಯವಸ್ಥೆ ಮಾಡುವ ರೀತಿಯಿಂದಾಗಿ. ಹಲವಾರು ಹೊಸ ಮುಖಗಳಿಗೆ ಸಮ್ಮೇಳನಗಳಲ್ಲಿ ಅವಕಾಶ ದೊರೆಯುತ್ತಿತ್ತು

*ಡಾ,ಶೇಖರ್ ಗೌಡರ ಬಲಗೈ ಭಂಟ*
ಡಾ, ಶೇಖರ ಗೌಡ ಮಾಲಿ ಪಾಟೀಲರಂತಹ ಅನೇಕ ಗಣ್ಯ ವ್ಯಕ್ತಿಗಳ ಸಂಪರ್ಕದಿಂದಾಗಿ ತನ್ನ ಆತ್ಮೀಯತೆಯ ಸಂಪರ್ಕವನ್ನು ರಾಜ್ಯಮಟ್ಟದವರೆಗೆ ವಿಸ್ತರಿಸಿಕೊಂಡು ಶೇಖರ್ ಗೌಡ ಮಾಲಿ ಪಾಟೀಲ ಬಲಗೈ ಭಂಟನಂತೆ ಸಾಹಿತಿಕ ಸಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿ ಪ್ರತಿಯೊಂದು ಯಶಸ್ವಿಗೊಳಿಸುವ ಕಲೆಯನ್ನು ನಿಜಕ್ಕೂ ಮೆಚ್ಚಬೇಕಾದ್ದುದೆ, ಶೇಖರ ಗೌಡ ಮಾಲಿ ಪಾಟೀಲರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲೇಬೇಕೆನ್ನುವ ಹಠದೊಂದಿಗೆ ಇಡೀ ರಾಜ್ಯ ಸುತ್ತಿ ರಾಜ್ಯದ ಪ್ರತಿಯೊಬ್ಬ ಪರಿಷತ್ತಿನ ಸದಸ್ಯರಿಗೆ ಮನವಿ ಮಾಡಿದರು ಕೂಡ ಶೇಖರಗೌಡರ ಸೋಲು ರಾಜಣ್ಣನಿಗೆ ಒಂದು ದೊಡ್ಡ ಆಘಾತ ತಂದಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಕೆಲವು ನೂರುಗಳ ಲೆಕ್ಕದಲ್ಲಿದ್ದ ಸದಸ್ಯರ ಸಂಖ್ಯೆಯನ್ನು ಸಾವಿರದ ಲೆಕ್ಕಕ್ಕೆ ವಿಸ್ತರಿಸಿದ ಕೀರ್ತಿ ರಾಜಣ್ಣನಿಗೆ ಸಲ್ಲುತ್ತದೆ
*ಜನರ ಸಾಹಿತ್ಯ ಪರಿಷತ್*
ಪರಿಷತ್ತಿನ ಸಂಘಟನೆ ಎಂದರೆ ತನ್ನ ಆರೋಗ್ಯ ತನ್ನ ವ್ಯವಹಾರವನ್ನು ಲೆಕ್ಕಿಸದೆ ಚಟವಟಿಕೆಯಲ್ಲಿ ತೊಡಗುತಿದ್ದ ರಾಜಣ್ಣನಿಗೆ ನಾಡಿನ ತುಂಬೆಲ್ಲ ಆತ್ಮೀಯ ಬಳಗವೇ ಹೆಚ್ಚಿದೆ ಇಷ್ಟೆಲ್ಲಾ ಇದ್ದರೂ ಕೂಡ ಒಂದು ಸಾಹಿತ್ಯ ಸಮ್ಮೇಳನದಲ್ಲಿಯೂ ಕೂಡ ನನ್ನ ಗಮನಕ್ಕೆ ಬಂದಂತೆ ರಾಜಣ್ಣ ನೇರವಾಗಿ ಸನ್ಮಾನವನ್ನು ಸ್ವೀಕರಿಸಲಿಲ್ಲ ಪರಿಷತ್ತಿನ ಅಧ್ಯಕ್ಷನ್ನಾಗಿ ನಾನು ಇತರರಿಗೆ ಸನ್ಮಾನ ಮಾಡಬೇಕೆ ಹೊರತು ನಾನೇ ಸನ್ಮಾನ ಸ್ವೀಕರಿಸಬಾರದು ಎನ್ನುವುದು ಆತನ ಆಯ್ಕೆಯಾಗಿತ್ತು

ಈ ಎಲ್ಲಾ ಕಾರಣಗಳಿಂದಾಗಿ ರಾಜಣ್ಣ ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಸಾಹಿತ್ಯ ಪರಿಷತ್ತನ್ನಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾಗುತ್ತಾನೆ ಈತನ ಅಗಲಿಕೆಯಿಂದಾಗಿ ಸಾಹಿತ್ಯ ಪ್ರೇಮಿಗಳಲ್ಲಿನ ಒಂದು ಆತ್ಮೀಯ ಸಂಪರ್ಕದ ಕೊಂಡಿ ಕಳಚಿದಂತಾಗಿದೆ ಕುಟುಂಬದ ಸದಸ್ಯರಂತೆ ಅವರ ಆತ್ಮೀಯ ಬಳಗಕ್ಕೂ ಕೂಡ ರಾಜಣ್ಣನ ಸಾವು ಭರಿಸಲಾಗದ ನಷ್ಟವಾಗಿದೆ

ರಾಜಣ್ಣನ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರ ವಿಶೇಷತೆ ಎಂದರೆ ಆತ್ಮೀಯತೆ ಸ್ನೇಹಶೀಲತೆ ಸೇವ ಗುಣಗಳಾಗಿವೆ ಅವರೆಲ್ಲರಲ್ಲಿ ರಾಜ ನನ್ನದು ಸ್ವಲ್ಪ ಹೆಚ್ಚಿನ ಆತ್ಮೀಯ ಸಂಪರ್ಕವಿತ್ತು.

ಇಂಥಹ ಸಂದರ್ಭದಲ್ಲಿ ರಾಜಣ್ಣನ ಅನಾರೋಗ್ಯದ ಸಂದರ್ಭದಲ್ಲಿ ರಾಜಣ್ಣನಿಗೆ ಉಪಚಾರಗೈದ ಸಹೋದರಿ ಶ್ರೀಮತಿಭಾರತಿ ಮಗಳುಭುವನಾ, ಚಿರಂಜೀವಿಯವರ ಹಾಗೂ ಅವರ ಬಂಧು ಬಳಗದ ತ್ಯಾಗ ಸಹನೆಯನ್ನು ಎಷ್ಟು ನೆನೆದರು ಸಾಲದು ರಾಜಣ್ಣನ ಈ ಸಾವಿನ ದುಃಖವನ್ನು ಭರಿಸುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತಾ ನಮ್ಮೆಲ್ಲರ ಆತ್ಮೀಯತೆಯ ಪ್ರತಿರೂಪದಂತಿದ್ದ ರಾಜಣ್ಣನಿಗೆ ಕೊಪ್ಪಳ ಕಸಾಪ ಮತ್ತು ಕನ್ನಡ ಮನಸಿನ ಎಲ್ಲರೂ ನುಡಿನಮನ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now

Related Posts