World

ಸಂಪಾದಕರ ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳ ಸನ್ಮಾನ

WhatsApp Group Join Now
Telegram Group Join Now

ಬೆಳಗಾವಿ ; ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಭೆ ಇಂದು ನಡೆಯಿತು.

ಬೆಳಗಾವಿಯ ಸನ್ಮಾನ ಡಿಲಕ್ಸ್ ಹೋಟೆಲಿನಲ್ಲಿ ನಡೆದ ಈ ಸಭೆಯಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಅಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ, ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಚೆನ್ನಬಸವ ಅವರುಗಳನ್ನು ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಸಿ. ತಿಪ್ಪೇಸ್ವಾಮಿ ಅವರು ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.
ಉಪಾಧ್ಯಕ್ಷರಾದ ಮಂಜುನಾಥ ಅಬ್ಬಿಗೇರಿ ಮಾತನಾಡಿ ಜಾಹಿರಾತು ನೀತಿ ಸೇರಿದಂತೆ ಇತರ ವಿಷಯಗಳ ಕುರಿತು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ವಿವರಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ ಮಾತನಾಡಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಉಳಿವು ಮತ್ತು ಬೆಳವಣಿಗೆಗಾಗಿ ಒಗ್ಗಟ್ಟಿನಿಂದ ಪ್ರಯತ್ನಿಸಬೇಕಿದೆ ಎಂದರು.
ಹಿರಿಯ ಸಂಪಾದಕ ಎಸ್. ಬಿ. ಧಾರವಾಡಕರ್ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.
ಸಂಪಾದಕರ ಸಂಘದ ಜಿಲ್ಲಾ ಅಧ್ಯಕ್ಷ ಮುರುಗೇಶ್ ಶಿವಪೂಜಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಕಳೆದ 35 ವರ್ಷಗಳಲ್ಲಿ ಸಂಘ ನಡೆದು ಬಂದ ದಾರಿಯನ್ನು ವಿವರಿಸಿದರು, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮುಚಳಂಬಿ ಅವರು ವಂದಿಸಿದರು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಬೆಂಗಳೂರು. ಈ ಸಂಘಕ್ಕೆ ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘವು ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡು ಅಫಿಲಿಯೇಶನ್ ( ಸಂಲಗ್ನತೆ ಅಥವಾ ಸಂಯೋಜನೆ) ಹೊಂದುವ ಕುರಿತು ಇದೇ ಸಭೆಯಲ್ಲಿ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಯಿತು. ಅದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಅಧ್ಯಕ್ಷರು, ರಾಜ್ಯ ಉಪಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ತದನಂತರ ಬೆಳಗಾವಿ ಜಿಲ್ಲೆಯಿಂದ ರಾಜ್ಯ ಪರಿಷತ್ತಿಗೆ ಸಂಪಾದಕರುಗಳಾದ ಮನೋಹರ್ ಕಾಲಕುಂದ್ರಿಕರ್, ಎ. ಬಿ ಧಾರವಾಡಕರ್ ಮತ್ತು ಎನ್ . ಪ್ರಶಾಂತ್ ರಾವ್ ಅವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯರುಗಳಾದ ಹಿರೋಜಿ ಮಾವರ್ಕರ್, ಶ್ರೀಮತಿ ಬಬಿತಾ ಪವಾರ್ , ಮಲ್ಲಿಕಾರ್ಜುನ್
ಹೆಗನಾಯಕ್ ಮತ್ತು ಗುರುರಾಜ ಕದಮ ಅಲ್ಲದೆ ದಿನಪತ್ರಿಕೆಗಳ ಸಂಪಾದಕರುಗಳಾದ ಶಿವರಾಯ ಏಳುಕೋಟಿ, ವಿಜಯ್ ಕುಮಾರ್ ಮುಚ್ಚಳಂಬಿ, ನಾನಪ್ಪ ಮಾವರ್ಕರ್, ಜಯಪ್ರಕಾಶ್ ಜೋಶಿ, ಮತೀನ ಧಾರವಾಡಕರ್, ರಾಜೇಂದ್ರ ಪವಾರ್ ಮತ್ತು ಚೆನ್ನಪ್ಪ ವಗ್ಗಣ್ಣವರ್ ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

WhatsApp Group Join Now
Telegram Group Join Now

Related Posts