World

ಬಿಜಕಲ್ ಗ್ರಾಮದಲ್ಲಿ ಮತದಾನದ ಜಾಗೃತಿ ಬೆಳಕು

WhatsApp Group Join Now
Telegram Group Join Now

ಕೊಪ್ಪಳ ಏಪ್ರಿಲ್ 03 (ಕರ್ನಾಟಕ ವಾರ್ತೆ)ಗ್ರಾಮ ಪಂಚಾಯತಿ ವತಿಯಿಂದ ಪಂಜಿನ ಮೆರವಣಿಗೆ ಮೂಲಕ ಜಾಗೃತಿ ಜಾಥಾಕ್ಕೆ * ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ನಿಂಗಪ್ಪ ಎಸ್ ಮಸಳಿ ಅವರು ಏಪ್ರಿಲ್ 02 ರಂದು ಚಾಲನೆ ನೀಡಿದರು.

ಸೂರ್ಯ ಪಶ್ಚಿಮದಲ್ಲಿ ಸಣ್ಣಗೆ ಜಾರಿ ಕತ್ತಲು ಆವರಿಸುವ ಹೊತ್ತಿಗೆ ಮೂಡಿತು ಮೇಣದ ಬೆಳಕಿನ ಹೊಂಬೆಳಕು. ಹೌದು, ಇದು ಅಂತಿಂತಹ ಬೆಳಕಲ್ಲ. *ನನ್ನ ಮತ, ನನ್ನ ಹಕ್ಕು* ಹಾಗೂ *ಮತದಾನ ಮಾಡುವವನೇ ಮಹಾಶೂರ* ಎಂಬ ಬೆಳಗಿದ ದೀಪಗಳು ! , ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮೇಣದ ಬತ್ತಿ ಹಿಡಿದು ಜಾಗೃತಿ ಮೂಡಿಸಿತು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ಆನಂದರಾವ್ ಕುಲಕರ್ಣಿ ರವರ ನೇತೃತ್ವದ ತಂಡವು ಮತದಾನ ಹಕ್ಕಿನ ಬೆಳಕು ಮೂಡಿಸಿತು.
ಈ ಬೆಳಕು ಕಂಡು ಬಂದಿದ್ದು, ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಜಕಲ್ ಗ್ರಾಮದಲ್ಲಿ.

ನಂತರ ಈ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಮಾನ್ಯ ತಾ ಪಂ ಇಓ *ನಿಂಗಪ್ಪ ಎಸ್ ಮಸಳಿ* ರವರು ಮಾತನಾಡಿ, ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಶೇ.100 ರಷ್ಟು ಮತ ಚಲಾಯಿಸಿ ಯೋಗ್ಯ ಹಾಗೂ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು ಎಂದರು.

ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು ಎಂದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಆನಂದರಾವ್ ಕುಲಕರ್ಣಿ ಅವರು ಮಾತನಾಡಿ ಲೋಕಸಭಾ ಚುನಾವಣಾ – 2024 ಅಂಗವಾಗಿ ಮತದಾನ ಜಾಗೃತಿ ಮೂಡಿಸಲು ಗ್ರಾಮದಲ್ಲಿ ಗ್ರಾಮದ ಮಹಿಳೆಯರಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಯಿತು. ಮಹಿಳೆಯರು ಪಂಜಿನ ಮೆರವಣಿಗೆ ಮೂಲಕ ಜಾಗೃತಿ ಜಾಥಾವು ಜಾಗೃತಿ ಗೀತೆಗಳೊಂದಿಗೆ ಬಿಜಕಲ್ ಗ್ರಾಮದ ಪ್ರಮುಖ ಮುಖ್ಯ ರಸ್ತೆಗಳಲ್ಲಿ ನಡೆದು ಗ್ರಾಮಸ್ಥರನ್ನು ಆಕರ್ಷಿಸಿತು ಹಾಗೂ ಈ ಸಾರಿ ನೂರಕ್ಕೆ ನೂರರಷ್ಟು ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕೆಂದು ಹೇಳಿದರು.

ಇದೆ ವೇಳೆ ತಾಲೂಕ್ ಪಂಚಾಯತಿ ವಿಷಯ ನಿರ್ವಾಹಕರಾದ ಸಂಗಪ್ಪ ನಂದಾಪುರ ರವರು ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ 100 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಸಿಬ್ಬಂದಿಯಾದ ಚಂದ್ರಶೇಖರ್ ಜಿ ಹಿರೇಮಠ ಗ್ರಾಪಂ ಸಿಬ್ಬಂದಿಗಳಾದ ಹನುಮಂತಪ್ಪ , ದುರುಗಪ್ಪ , ನೀಲಕಂಠಪ್ಪ , ಹನುಮಂತಪ್ಪ , ಬಾಲಾಜಿ , ನಿಂಗಪ್ಪ ,ಸ್ವಾತಿ ಬೀಳಗಿಮಠ , ಲಕ್ಷವ್ವ , ಎನ್ ಆರ್ ಎಲ್ ಎಂ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರರಾದ ಬಸಮ್ಮ , ಲಕ್ಷ್ಮಿ , ಹೇಮಾವತಿ , ಸಿದ್ದಲಿಂಗಮ್ಮ ಹಾಗೂ ಗ್ರಾಮದ ಗುರು ಹಿರಿಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

WhatsApp Group Join Now
Telegram Group Join Now

Related Posts