World

ಮಠ ಮಾನ್ಯಗಳು ಸಮಾಜದ ಪ್ರಗತಿ ಮತ್ತು ಭಾವೈಕ್ಯತೆಯ ಕೇಂದ್ರಗಳಾಗಬೇಕು; ಡಾ.ಅನ್ನಪೂರ್ಣ ಹಿರೇಮಠ

WhatsApp Group Join Now
Telegram Group Join Now

ಬೆಳಗಾವಿ; ಮಠ ಮಾನ್ಯಗಳು ಸಮಾಜದ ಪ್ರಗತಿ ಮತ್ತು ಭಾವೈಕ್ಯತೆಯ ಕೇಂದ್ರಗಳಾಗಬೇಕು.. ಶಿಕ್ಷಕಿ ಡಾ.ಅನ್ನಪೂರ್ಣ ಹಿರೇಮಠ •ಅಭಿಮತ ವ್ಯಕ್ತಪಡಿಸಿದರು.
ಅವರು ಇತ್ತೀಚೆಗೆ ನಡೆದ ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ವಾರದ ಸತ್ಸಂಗ ಕಾರ್ಯಕ್ರಮದ ಸಂದರ್ಭದಲ್ಲಿ ಬೆಳಗಾವಿಯ ನಿವಾಸಿಗಳೇ ಆದ ಶರಣೆ ಡಾ.ಅನ್ನಪೂರ್ಣ ಹಿರೇಮಠ್ ” ಇಂದಿನ ಮಠಗಳು ಮತ್ತು ಸಮಾಜ” ಎನ್ನುವ ವಿಷಯದ ಕುರಿತಾಗಿ ತಮ್ಮ ಅನುಭಾವ ಹಂಚಿಕೊಂಡರು. ಮಾನವನ ಜೀವನದ ಹಲವಾರು ಘಟ್ಟಗಳನ್ನು ಪರಿಚಯಿಸುತ್ತಾ, ಧಾರ್ಮಿಕ, ಸಾಮಾಜಿಕ ಸಾಂಸ್ಕೃತಿಕ ಮೌಲ್ಯಗಳ ಅಳವಡಿಕೆಯಲ್ಲಿ ಧರ್ಮವು ಹೇಗೆ ಸಹಾಯ ಮಾಡಿತು ಎನ್ನುವುದನ್ನು ವಿವರವಾಗಿ ಪರಿಚಯಿಸಿದರು. ಮಠಮಾನ್ಯಗಳ ಹುಟ್ಟು ಮತ್ತು ಮತ್ತು ಬೆಳವಣಿಗೆ ಕುರಿತಾಗಿ ವಿವರಿಸುತ್ತ ಪ್ರಚಲಿತ ಮಠಗಳು ಶಿಕ್ಷಣ ಮತ್ತು ಸಂಸ್ಕೃತಿ ಬೆಳವಣಿಗೆಯಲ್ಲಿ ಯಾವ ರೀತಿ ಪಾತ್ರ ವಹಿಸುತ್ತಿವೆ ಎಂಬುದನ್ನು ಕೂಡ ಹಲವಾರು ಉದಾಹರಣೆಗಳ ಸಮೇತ ಪ್ರಸ್ತುತಪಡಿಸಿದರು. ದರ್ಮದ ಸಂಘಟನೆಯಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದ್ದು ಆ ನಿಟ್ಟಿನಲ್ಲಿ ಮಠಮಾನ್ಯಗಳು ಇನ್ನು ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂಬುದನ್ನು ಒತ್ತಿ ಹೇಳಿದರು. ಪ್ರಸ್ತುತ ಬದುಕಿನ ಪ್ರಚಲಿತ ವಿದ್ಯಮಾನಗಳ ಉದಾಹರಣೆಗಳೊಂದಿಗೆ ಮತ್ತು ತಮ್ಮದೇ ಆದ ಸ್ವರಚಿತ ಕವಿತೆಗಳ ಮೂಲಕ ಸುದೀರ್ಘವಾಗಿ ಅವರು ತಮ್ಮ ಅನುಭವ ಪ್ರಸ್ತುತ ಪಡಿಸಿದರು.ಲಿಂಗಾಯತ ಸಂಘಟನೆಯ ಕಾರ್ಯಕರ್ತರಾದ ಮಲ್ಲಿಕಾರ್ಜುನ್ ಸಿರುಗುಪ್ಪಿ ಶೆಟ್ಟರ್ ಮತ್ತು ಅವರ ಧರ್ಮಪತ್ನಿ ನಿರ್ಮಲ ಶಿರಗುಪ್ಪಿ ಶೆಟ್ಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘಟನೆಯ ಅಧ್ಯಕ್ಷರಾದ ಶ್ರೀ ಈರಣ್ಣ ದೇಯನ್ನವರ ಉಪನ್ಯಾಸದ ಕುರಿತಾಗಿ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು. ಶರಣೆ ಮಹಾದೇವಿ ಅರಳಿ ಅವರ ನೇತೃತ್ವದಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಪ್ರಾರಂಭದಲ್ಲಿ ಜಯಶ್ರೀ ಚವಲಗಿ, ಆನಂದ ಕರ್ಕಿ, ಎ.ಬಿ ಜೇವಣಿಯವರಿಂದ ವಚನ ಗಾಯನ ನೆರವೇರಿತು. ಸಂಘಟನೆ ಅಧ್ಯಕ್ಷರಾದ ಶರಣ ಶ್ರೀ ಈರಣ್ಣ ದೇಯನ್ನವರ ಅವರಿಂದ ಪ್ರಸಾದ ಸೇವೆ ನೆರವೇರಿತು. ಸಂಘಟನೆ ಉಪಾಧ್ಯಕ್ಷರಾದ ಶರಣ ಶ್ರೀ ಸಂಗಮೇಶ ಅರಳಿ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು..ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ಶಶಿಭೂಷಣ್ ಪಾಟೀಲ್, ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ಮಹಾಂತೇಶ್ ಮೆಣಸಿನಕಾಯಿ,ಆನಂದ.ಕಕಿ೯ ವಿ.ಕೆ.ಪಾಟೀಲ, ಬಸವರಾಜ ಕರಡಿಮಠ,ಜಯಶ್ರೀ ಚಾವಲಗಿ,ಕಂಬಿ, ವಿದ್ಯಾ ತಿಗಡಿ, ಅಕ್ಕಮಹಾದೇವಿ ತೆಗ್ಗಿ ,ಬಸವರಾಜ ಬಿಜ್ಜರಗಿ, ಹೀಗೆ ಸಂಘಟನೆಯ ಕಾರ್ಯಕರ್ತರು & ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು..

WhatsApp Group Join Now
Telegram Group Join Now

Related Posts