World

ಶಿಕ್ಷಕರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಹೆಮ್ಮೆಯ ವಿಷಯ :ಬಿ ಇ ಓ ದಾಸಪ್ಪನವರ

WhatsApp Group Join Now
Telegram Group Join Now

ಬೆಳಗಾವಿ ದಿ  :-ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯ್ಯೊಪಾದ್ಯಾಯರ ಸಭೆಯು ಇಂದು ಮುತಗಾ ಗ್ರಾಮದ ಎನ್ ಇ ಎಸ್ ಪ್ರೌಢ ಶಾಲೆಯಲ್ಲಿ ಜರುಗಿತು
ತಾಲೂಕಾ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಎಸ್ ಪಿ ದಾಸಪ್ಪನವರ ರವರು ಅಧ್ಯಕ್ಷತೆ ವಹಿಸಿದ್ದರು, ಸಭೆಯಲ್ಲಿ ತಾಲೂಕಿನ ಆಡಳಿತಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ವಿವಿಧ ಅಧಿಕಾರಿಗಳು ನೀಡಿದರು ಶಾಲೆಗಳಲ್ಲಿ ಉತ್ತಮವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಂತೆ, ಕ್ರಮ ತೆಗೆದುಕೊಳ್ಳುವಂತೆ ಮಾರ್ಗದರ್ಶನ ಮಾಡಿದರು
ಸಭೆಯಲ್ಲಿ ಇತ್ತೀಚೆಗೆ ಖಾನಾಪುರ ತಾಲೂಕಿನ ಗಂದಿಗವಾಡದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶಿಕ್ಷಕರಾದ ಮೃತ್ಯುಂಜಯಸ್ವಾಮಿ ಹಿರೇಮಠ ರವರನ್ನು ಸಭೆಯಲ್ಲಿ ಬಿ ಇ ಓ ದಾಸಪ್ಪನವರ ಸನ್ಮಾನ ಮಾಡಿ ಅಭಿನಂದಿಸಿದರು
ಬೆಳಗಾವಿ ತಾಲೂಕಿನ ಶಿಕ್ಷಕರೊಬ್ಬರೂ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿದ್ದು ಹೆಮ್ಮೆಯ, ಅಭಿಮಾನದ ವಿಷಯವಾಗಿದ್ದು ಅವರ ಸಾಧನೆ ಅಪರೂಪದ್ದು ಎಂದು ಹೇಳಿ ಅಭಿನಂದನೆಗಳು ಸಲ್ಲಿಸಿದರು
ಸನ್ಮಾನ ಸ್ವೀಕರಿಸಿದ ಮೃತ್ಯುಂಜಯ ಹಿರೇಮಠ ರವರು ಶಿಕ್ಷಕರ ವೃತ್ತಿಯು ಶ್ರೇಷ್ಠ ವಾಗಿದ್ದು, ಶಿಕ್ಷಕರಾಗಿ ಸೇವೆ ಸಲ್ಲಿಸುವುದು ಪುಣ್ಯಮಯ ಕೆಲಸ, ಶಿಕ್ಷಕರಾದ ನಾವು ವಿದ್ಯಾರ್ಥಿಗಳ ಸರ್ವ ಪ್ರಗತಿಗೆ ಶ್ರಮಿಸಬೇಕೆಂದರು, ಶಿಕ್ಷಕರು ಓದು,ಅಧ್ಯಯನ ಕಡೆಗೆ ಗಮನ ನೀಡಬೇಕು, ತಾವು  ಹುಟ್ಟಿದ ಗ್ರಾಮದಲ್ಲಿ ಅರವತ್ತರ ವಯಸ್ಸಿನ ಸಂಭ್ರಮದಲ್ಲಿ ಅಧ್ಯಕ್ಷ ಸ್ಥಾನ ದೊರಕಿದ್ದು ಪುಣ್ಯ ಎಂದು ಹೇಳಿ ಸನ್ಮಾನ ಮಾಡಿದಕ್ಕೆ ಧನ್ಯವಾದಗಳು ಸಲ್ಲಿಸಿದರು
ಕಾರ್ಯಕ್ರಮ ತಾಲೂಕಿನ ಮುಖ್ಯ್ಯೊಪಾದ್ಯಾಯರು, ಸಂಘಟನೆ ಗಳ ಪದಾಧಿಕಾರಿಗಳಾದ ಬಸವರಾಜ ಸುಣಗಾರ, ವಿ ಎಮ್ ಮುಳ್ಳೂರ, ವಾಯ್ ಬಿ ಪೂಜಾರ, ಆನಂದಗೌಡ ಪಾಟೀಲ, ಪಿ ಎಲ್ ಹೊಟ್ಟಿನವರ, ಸೇರಿದಂತೆ ಪದಾಧಿಕಾರಿಗಳು, ಅಕ್ಷರ ದಾಸೋಹ ಅಧಿಕಾರಿ ಗಳಾದ ಆರ್ ಸಿ ಮುದಕನಗೌಡರ, ಪಿ ಇ ಓ ಬದ್ರಿ ಮೇಡಂ, ಬಿ ಆರ್ ಸಿ ಅಧಿಕಾರಿ ಡಾ ಎಮ್ ಎಸ್ ಮೇದಾರ, ಶಿಕ್ಷಣ ಸಂಯೋಜಕರಾದ ರಾಜೇಂದ್ರಕುಮಾರ ಚಲವಾದಿ, ಬಿ ಎಮ್ ಬಡಿಗೇರ, ಎಸ್ ಐ ಖುದ್ದನವರ ಸೇರಿದಂತೆ ಸಿ ಆರ್ ಪಿ, ಬಿ ಆರ್ ಪಿ ಗಳು ಹಲವರು ಉಪಸ್ಥಿತರಿದ್ದರು
WhatsApp Group Join Now
Telegram Group Join Now

Related Posts