World

ಸಾಧನೆಯ ಬದುಕಿಗಾಗಿ ಮಹನೀಯರ ಚರಿತ್ರೆಗಳು ಸಹಕಾರಿ – ಸಾಹಿತಿ ಸುನಂದಾ ಎಮ್ಮಿ

WhatsApp Group Join Now
Telegram Group Join Now

ಬೆಳಗಾವಿ ೨೯: ಕನ್ನಡ ನಾಡಿನ ಈ ಪುಣ್ಯ ಭೂಮಿಯಲ್ಲಿ ನೂರಾರು ರ್ಷಗಳ ಹಿಂದಿನಿಂದಲೂ ಅನೇಕ ಮಹನೀಯರು ಎಲೆ ಮರೆಯ ಕಾಯಿಯಂತೆ ಪ್ರಚಾರಕ್ಕೆ ಬರದೇ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದು ನಮ್ಮ ಈಗೀನ ಪಿಳಿಗೆಗೆ ಇಂತಹ ಮಹಾನ ವ್ಯಕ್ತಿಗಳ ಬದುಕಿನ ಚರಿತ್ರೆಗಳನ್ನು ತಿಳಿಸುವಂತಹ ಕರ್ಯಗಳು ನಡೆಯಬೇಕಿವೆ. ಸಾಧನೆಯ ಬದುಕಿಕಾಗಿ ಇಂತಹ ಮಹನೀಯರ ಚರಿತ್ರೆಗಳು ಅತ್ಯಂತ ಸಹಕಾರಿಯಾಗಿದ್ದು ಯುವ ಜನಾಂಗ ಚರಿತ್ರೆಗಳನ್ನು ಅಭ್ಯಸಿಸುವಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕೆಂದು ಚನ್ನಮ್ಮ ಕಿತ್ತೂರಿನ ಹಿರಿಯ ಸಾಹಿತಿ ಶ್ರೀಮತಿ ಸುನಂದಾ ಎಮ್ಮಿ ಹೇಳಿದರು.
                           ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲೆ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ದಿ ಸಂಘ ದ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ೬ ನೇ ತಿಂಗಳ ಕರ್ಯಕ್ರಮದಲ್ಲಿ ದಿವಂಗತ ಡಾ. ಶಿ.ಚ. ನಂದಿಮಠ ಅವರ ಬದುಕು ಬರಹ ಕುರಿತಂತೆ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
                           ಮುಂದುವರೆದು ಮಾತನಾಡಿದ ಅವರು ದಿವಂಗತ ಡಾ. ಶಿ.ಚ. ನಂದಿಮಠ ರವರು ರ್ವ ಶಿಕ್ಷಣ ತಜ್ಞ, ವಿದ್ವಾಂಸ, ಸಾಹಿತಿಯಾಗಿ ಸುಮಾರು ೧೨೩ ರ್ಷಗಳ ಹಿಂದೆ ಈ ಕನ್ನಡ ನಾಡಿನಲ್ಲಿ ಅತ್ಯದ್ಬುತ ಸೇವೆ ಸಲ್ಲಿಸಿದ್ದರು. ಅನೇಕ ಪ್ರಭಂದಗಳು, ಸಾಹಿತ್ಯಿಕ ಮತ್ತು ಶೈಕ್ಷಣಿಕ ಅಭಿವೃದ್ದಿಯಲ್ಲಿ ಅಪಾರವಾಗಿ ಶ್ರಮಿಸಿದ ಅವರು ವ್ಯಕ್ತಿಯಾಗಿರದೇ ಶಕ್ತಿಯಾಗಿ, ಚೈತನ್ಯದ ಚಿಲುಮೆಯಾಗಿ ನಮ್ಮ ಸಮಾಜಕ್ಕೆ ಬೆಳಕು ತೋರುವ ದೀಪ ಸ್ಥಂಭವಾಗಿದ್ದರು. ಇಂತಹ ಅನೇಕ ಮಹನೀಯರ ಸಾಧನೆಯ ಬದುಕಿನ ಕುರಿತು ಬೆಳಕು ಚೆಲ್ಲುವ ಕರ್ಯಗಳು ನಿರಂತರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
                            ಕರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶೀಮತಿ ಮಂಗಲಾ ಮೆಟಗುಡ್ಡ ಮಾತನಾಡಿ ಪ್ರವಾಹ ವಿರುದ್ದ ಹೋರಾಟ ನಡೆಸಿ ಜಯ ಗಳಿಸಿದಾಗ ಮಾತ್ರ ಅದು ಸಾಧನೆಯಾಗುವುದು ಅಂತಹ ಅನೇಕರು ಈ ಕನ್ನಡ ನಾಡಿನಲ್ಲಿ ಸಾಧಿಸಿ ನಮಗೆಲ್ಲಾ ಬದುಕಿನ ಸಾಧನೆಯ ದಾರಿಗಳನ್ನು ತೋರಿಸಿದ್ದು ಆ ನಿಟ್ಟಿನಲ್ಲಿ ಕನ್ನಡಿಗರು ನಮ್ಮ ನಾಡು ನುಡಿಯ ಕುರಿತಂತೆ ಅಭಿಮಾನ ಬೆಳಸಿಕೊಂಡು ಕನ್ನಡ ನಾಡು ನುಡಿಯ ಸೇವೆಯನ್ನು ನೂರಾರು ರ್ಷಗಳ ಹಿಂದೆಯೇ ಮಾಡಿರುವ ಸಾಧಕರ ಬದುಕನ್ನು ನಮ್ಮ ಆರ್ಶವನ್ನಾಗಿಟ್ಟುಕೊಂಡು ಮುನ್ನಡೆಯಬೇಕೆಂದರು.
                           ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಯರಗಟ್ಟಿ ತಾಲುಕಾ ಅಧ್ಯಕ್ಷ ಟಿ. ಎಂ. ಕಾಮಣ್ಣವರ , ಬೆಳಗಾವಿ ತಾಲುಕಾ ಅಧ್ಯಕ್ಷ ಸುರೇಶ ಹಂಜಿ ಉಪಸ್ಥಿತರಿದ್ದರು.
                              ಕರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಾ. ರಾ. ಸುಳಕುಡೆ, ಹಿರಿಯ ಪತ್ರಕರ್ತ ಮುರಗೇಶ ಶಿವಪೂಜಿ, ಡಾ. ಸೋಮಶೇಖರ ಹಲಸಗಿ, ಜ್ಯೋತಿ ಬಾದಾಮಿ, ಪ್ರತಿಭಾ ಕಳ್ಳಿಮಠ, ಶೈಲಜಾ ಬಿಂಗೆ, ಬಿ.ಡಿ.ಮಠಪತಿ, ಸುರೇಶ ಕರವಿನಕೊಫ್ಪ , ರುದ್ರಮ್ಮ ಯಾಳಗಿ, ರತ್ನಕ್ಕಾ ಜೊಂಡ, ಶಿವಾನಂದ ತಲ್ಲೂರ, ವೀರಬದ್ರ ಅಂಗಡಿ, ಗುರು ಪಾಟೀಲ, ಶ್ರೀಧರ ಕುಲರ್ಣಿ, ಆರ್. ಬಿ. ಬನಶಂಕರಿ, ಚನ್ನಬಸಯ್ಯಾ ಕಟಾಪುರಿಮಠ ಮುಂತಾದವರು ಉಪಸ್ಥಿತರಿದ್ದರು.
                                ಕನ್ನಡ ಸಾಹಿತ್ಯ ಪರಿಷತ್ ಹುಕ್ಕೇರಿ ತಾಲೂಕಾ ಅಧ್ಯಕ್ಷ ಪ್ರಕಾಶ ಬಸಪ್ರಭು ಅವಲಕ್ಕಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಗೌರವ ಕರ್ಯರ್ಶಿ ಎಂ.ವೈ ಮೆಣಸಿನಕಾಯಿ ಪ್ರಸ್ತಾವಿಕವಾಗಿ ಮಾತನಾಡಿದರು. ಆಕಾಶ್ ಥಬಾಜ ಕರ್ಯಕ್ರಮ ನರ್ವಹಿಸಿ ವಂದಿಸಿದರು.
WhatsApp Group Join Now
Telegram Group Join Now

Related Posts