State

ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ — ಕ್ಯೂಆರ್ ಕೋಡ್ ಬಳಸಿ ನಾನಾ ಸೌಕರ್ಯದ ಸ್ಥಳ ಹುಡುಕಿ

WhatsApp Group Join Now
Telegram Group Join Now

ಕೊಪ್ಪಳ ಡಿಸೆಂಬರ್ 22 (ಕರ್ನಾಟಕ ವಾರ್ತೆ): ಡಿಸೆಂಬರ್ 23 ಮತ್ತು 24ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅಂಜನಾದ್ರಿಗೆ ಬರುವ ಭಕ್ತರಿಗೆ ನಾನಾ ಸೌಲಭ್ಯಗಳ ಮಾಹಿತಿ ಲಭ್ಯವಾಗುವ ಹಾಗೆ ಜಿಲ್ಲಾಡಳಿತವು ಈ ಬಾರಿ ಕ್ಯೂಆರ್ ಕೋಡ್ ವಿಶೇಷ ವ್ಯವಸ್ಥೆಯನ್ನು ಸಹ ಮಾಡಿದೆ.
ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಪಾರ್ಕಿಂಗ್ ಸ್ಥಳಗಳು ಯಾವ ಯಾವ ಕಡೆಗಿವೆ. ಪ್ರಥಮ ಚಿಕಿತ್ಸಾ ಕೇಂದ್ರಗಳ ಎಲ್ಲಿಲ್ಲೆ ಇವೆ. ಕುಡಿಯುವ ನೀರಿನ ಸ್ಥಳಗಳು, ಸಹಾಯವಾಣಿ ಕೇಂದ್ರಗಳು, ಸ್ಥಾನಗೃಹಗಳ ಸ್ಥಳಗಳು ಯಾವ ಯಾವ ಕಡೆಗಳಲ್ಲಿ ಇವೆ ಎಂಬುದು ಸೇರಿದಂತೆ ನಾನಾ ಸೌಲಭ್ಯಗಳು ದೊರಕುವ ಸ್ಥಳಗಳ ಮಾಹಿತಿಯನ್ನು ಈ ಕ್ಯೂಆರ್ ಕೋಡ್ ಮೂಲಕ ಪಡೆಯಬಹುದಾಗಿದೆ.
ಅಂಜನಾದ್ರಿಗೆ ಹೊಸದಾಗಿ ಬರುವ ಭಕ್ತರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಈ ಬಾರಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಅಳವಡಿಸಿದ ಲಿಂಕ್ ಮೂಲಕವು ಈ ಮೇಲಿನ ಸ್ಥಳಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಕ್ಯೂಆರ್ ಕೋಡ್ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲಿ ಲಭ್ಯವಿರುತ್ತದೆ. ಭಕ್ತರ ಅನುಕೂಲಕ್ಕೆ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ. ಕ್ಯೂಆರ್ ಕೋಡ್ ಲಿಂಕ್ https://koppal.nic.in/hanumamala-events1/ ಅಥವಾ https://koppal.nic.in/ಹನುಮಮಾಲಾ-ಕಾರ್ಯಕ್ರಮ/ ಈ ರೀತಿ ಇರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ

WhatsApp Group Join Now
Telegram Group Join Now

Related Posts