World

ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯಸಚೇತಕರಾಗಿ ಕುಷ್ಟಗಿ ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಆಯ್ಕೆ

WhatsApp Group Join Now
Telegram Group Join Now

ಕೊಪ್ಪಳ:- ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರ ಸೂಚನೆಯ ಮೇರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ರವರು ಕುಷ್ಟಗಿಯ ಶಾಸಕರು ಹಾಗೂ ಬಿಜೆಪಿ ಕೊಪ್ಪಳ ಜಿಲ್ಲಾದ್ಯಕ್ಷರು ಆದ ದೊಡ್ಡನಗೌಡ ಎಚ್ ಪಾಟೀಲ್ ರವರನ್ನು ಆಯ್ಕೆ ಮಾಡಿದ್ದಾರೆ.

ಆಯ್ಕೆಯಾದ ಹಿನ್ನೆಲೆಯಲ್ಲಿ ಇಂದು ಕುಷ್ಟಗಿಯ ಬಸವೇಶ್ವರ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಪಕ್ಷದ ಕಾರ್ಯಕರ್ತರು ಶುಭಕೋರಿದರು.

ಕುಷ್ಟಗಿ ಮಂಡಲ ಅಧ್ಯಕ್ಷರಾದ ಬಸವರಾಜ ಹಳ್ಳೂರ ಬಿಜೆಪಿ ಮುಖಂಡರುಗಳಾದ ಮಲ್ಲಣ್ಣ ಪಲ್ಲೇದ್ ಶಶಿಧರ್ ಕವಲಿ ವಿನಯ್ ಮೇಲಿನಮನಿ ಯುವ ಮೋರ್ಚಾ ಅಧ್ಯಕ್ಷರಾದ ಉಮೇಶ್ ಯಾದವ್ ಈರಣ್ಣ ಸೊಬರದ್,ತಾಲೂಕ ಪ್ರದಾನ ಕಾರ್ಯದರ್ಶಿಯಾದ ಚಂದ್ರಕಾಂತ ವಡಿಗೇರಿಪರಶುರಾಮ ನಾಗರಾಳ,ರಾಜೇಶ ಪತ್ತಾರ,ಪ್ರಕಾಶ ಬೆದವಟ್ಟಿ,ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ

WhatsApp Group Join Now
Telegram Group Join Now

Related Posts